ADVERTISEMENT

ಗದಗಕ್ಕೆ ವೋಲ್ವೊ ಬಸ್‌ ಬೇಕು ಎಂದ ಸುನೀಲ್ ಜೋಶಿಗೆ ಶ್ರೀರಾಮುಲು ಪ್ರತಿಕ್ರಿಯೆ...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜನವರಿ 2023, 9:35 IST
Last Updated 6 ಜನವರಿ 2023, 9:35 IST
ಸುನೀಲ್‌ ಜೋಶಿ ಮತ್ತು ಶ್ರೀರಾಮುಲು
ಸುನೀಲ್‌ ಜೋಶಿ ಮತ್ತು ಶ್ರೀರಾಮುಲು    

ಬೆಂಗಳೂರು: ಗದಗಕ್ಕೆ ವೋಲ್ವೊ ಬಸ್‌ ಬೇಕು ಎಂದು ಮಾಜಿ ಕ್ರಿಕೆಟಿಗ ಸುನೀಲ್‌ ಜೋಶಿ ಅವರು ಮಾಡಿದ್ದ ಟ್ವೀಟ್‌ಗೆ ಸಾರಿಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದಾರೆ.

‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನನ್ನದೊಂದು ವಿನಮ್ರ ಮನವಿ. ಬೆಂಗಳೂರಿನಿಂದ ಗದಗಕ್ಕೆ ವೋಲ್ವೊ ಬಸ್‌ನ ಅಗತ್ಯವಿದೆ. ಇದಕ್ಕಾಗಿ ನಾವು 25 ವರ್ಷಗಳಿಂದ ಕಾಯುತ್ತಿದ್ದೇವೆ. ಗದಗಕ್ಕೆ ಐರಾವತ ಬಸ್‌ ಸೇವೆ ನೀಡಲು ಇದು ಸಕಾಲ’ ಎಂದು ಸುನೀಲ್‌ ಜೋಶಿ ಅವರು ಬುಧವಾರ ಟ್ವೀಟ್‌ ಮಾಡಿದ್ದರು.

ಇದಕ್ಕೆ ಸಾರಿಗೆ ಸಚಿವ ಶ್ರೀರಾಮುಲು ಅವರು ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ...

ADVERTISEMENT

‘ಕೆಎಸ್‌ಆರ್‌ಟಿಸಿ ಸದಾ ಜನರ ಸೇವೆಯಲ್ಲಿ ತೊಡಗಿದೆ. ಇದೇ ಸೋಮವಾರದಿಂದ ಸೇವೆ ಆರಂಭವಾಗಲಿದೆ. ಪೂಜನೀಯ ಪುಟ್ಟಜ್ಜೋರ ಪುಣ್ಯಭೂಮಿ, ನನ್ನ ಹೃದಯಕ್ಕೆ ಹತ್ತಿರವಾದ ಸ್ಥಳ ಗದಗಕ್ಕೆ ವೋಲ್ವೊ ಸೇವೆಗಳನ್ನು ಪ್ರಾರಂಭಿಸುತ್ತೇವೆ. ಅಲ್ಲಿನ ಜನ ನನಗೆ ಯಾವಾಗಲೂ ವಿಶೇಷವೆನಿಸುತ್ತಾರೆ’ ಎಂದು ಶ್ರೀರಾಮುಲು ಟ್ವೀಟ್‌ ಮಾಡಿದ್ದಾರೆ. ಈ ಮೂಲಕ ಗದಗಕ್ಕೆ ವೋಲ್ವೊ ಬಸ್‌ ಒದಗಿಸುವ ಸ್ಪಷ್ಟ ಭರವಸೆ ನೀಡಿದ್ದಾರೆ.

ಜೋಶಿ ಗದಗ್‌ ಮೂಲದವರು. ಗದುಗಿನ ವಿ.ಡಿ.ಎಸ್‌.ಟಿ.ಸಿ ಹೈಸ್ಕೂಲ್‌ನಲ್ಲಿ ಓದಿದ ಅವರು, ಎ.ಎಸ್‌.ಎಸ್‌. ವಾಣಿಜ್ಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಅಭ್ಯಾಸ ಮಾಡಿದರು. ಕ್ರಿಕೆಟ್‌ ರಂಗದ ಹಲವು ಹಂತಗಳನ್ನು ದಾಟಿ ಬಿಸಿಸಿಐನ ಆಯ್ಕೆ ಸಮಿತಿಯ ಮುಖ್ಯಸ್ಥರು ಆಗಿದ್ದ ಜೋಶಿ ಅವರ ಕ್ರಿಕೆಟ್‌ ಅಭ್ಯಾಸ ಆರಂಭವಾಗಿದ್ದೂ ಗದುಗಿನಲ್ಲೇ ಎಂಬುದು ವಿಶೇಷ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.