ADVERTISEMENT

ಖಾಸಗಿ ಆಸ್ಪತ್ರೆಯಲ್ಲಿ ಸಿಸೇರಿಯನ್‌ ಹೆಚ್ಚಳ: ವೈದ್ಯಕೀಯ ತಜ್ಞರ ಕಳವಳ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2022, 4:26 IST
Last Updated 19 ಸೆಪ್ಟೆಂಬರ್ 2022, 4:26 IST
   

ಬೆಂಗಳೂರು: ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015–16ರ ಪ್ರಕಾರ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿಸಿಸೇರಿಯನ್‌ ಹೆರಿಗೆ ಪ್ರಮಾಣ ಶೇ 40.3 ರಷ್ಟಿತ್ತು. 2019–20ರ ಸಮೀಕ್ಷೆಯಲ್ಲಿ ಈ ಪ್ರಮಾಣ ಶೇ 52.5ಕ್ಕೆ ಏರಿಕೆಯಾಗಿದೆ ಎಂದು ವೈದ್ಯಕೀಯ ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.

ಆಸ್ತ್ರಿಕಾ ಫೌಂಡೇಷನ್ ನಗರದಲ್ಲಿ ಶನಿವಾರ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ‘ಭಾರತದಲ್ಲಿ ಏರುತ್ತಿರುವ ಸಿವಿಭಾಗದ ದರಗಳು ಮತ್ತು ಸಂಭಾವ್ಯ ಪರಿಹಾರಗಳು’ ವಿಷಯದ ಬಗ್ಗೆತಜ್ಞರು ಚರ್ಚಿಸಿದರು.

‘ಇತ್ತೀಚಿನ ದಿನಗಳಲ್ಲಿ ಸಿಸೇರಿಯನ್‌ ಪ್ರಮಾಣ ಹೆಚ್ಚಿದೆ ಎನ್ನುವುದು ನಿಜ. ಇದರಲ್ಲಿ ವೈದ್ಯರ ಹಾಗೂ ಆಸ್ಪತ್ರೆಗಳ ಪಾತ್ರವೇನು, ತಾಯಿ ಹಾಗೂ ಅವಳ ಕುಟುಂಬದವರ ಆಸಕ್ತಿ ಎಷ್ಟು ಎನ್ನುವು ದನ್ನು ಪ್ರತ್ಯೇಕವಾಗಿ ನೋಡಬೇಕಾಗುತ್ತದೆ. ಸಿಸೇರಿಯನ್ ತೊಡಕುಗಳ ಬಗ್ಗೆ ಗರ್ಭಿಣಿ ಮತ್ತು ಅವರ ಕುಟುಂಬಕ್ಕೆ ಮಾಹಿತಿ ಹಾಗೂ ಜ್ಞಾನವನ್ನು ನೀಡ ಬೇಕು ಎಂದು ತಜ್ಞರು ಅಭಿಮತ
ವ್ಯಕ್ತಪಡಿಸಿದರು.

ADVERTISEMENT
ಆಸ್ತ್ರಿಕಾ ಫೌಂಡೇಷನ್ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಡಾ. ಪಲ್ಲವಿ ಚಂದ್ರ, ಜಾನ್ಹವಿ ನಿಲೇಕಣಿ ಹಾಗೂ ಡಾ. ನಚಿಕೇತ್ ಮೋರ್ ಚರ್ಚಿಸಿದರು – ಪ್ರಜಾವಾಣಿ ಚಿತ್ರ

ಫೌಂಡೇಷನ್ ಸಂಸ್ಥಾಪಕಿ ಜಾನ್ಹವಿ ನಿಲೇಕಣಿ ಮಾತನಾಡಿದರು.

ಪ್ರಸೂತಿ ತಜ್ಞೆ ಡಾ. ಪಲ್ಲವಿ ಚಂದ್ರ, ಡಾ. ನಚಿಕೇತ್ ಮೋರ್ ಅಭಿಮತ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.