ADVERTISEMENT

ಖರ್ಗೆ ತನಿಖೆ ವೇಳೆ ಕೈ ನಾಯಕರ ಮೌನ ಏಕೆ?: ಬಿಜೆಪಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 11:27 IST
Last Updated 14 ಜೂನ್ 2022, 11:27 IST
ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ   

ಬೆಂಗಳೂರು: ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ) ವಿಚಾರಣೆಗೆ ಒಳಪಡಿಸಿದಾಗ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರು ಜಾಣ ಮೌನವಹಿಸಿದ್ದೇಕೆ? ಮುಖ್ಯಮಂತ್ರಿ ಪದವಿಯ ಪ್ರಬಲ ಆಕಾಂಕ್ಷಿಯನ್ನು ತೆರೆಮರೆಗೆ ಸರಿಸುವ ಹುನ್ನಾರವಿತ್ತೇ ಎಂದು ಬಿಜೆಪಿ ಪ್ರಶ್ನಿಸಿದೆ.

ಈ ಕುರಿತು ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ‘ಪ್ರಿಯಾಂಕ್‌ ಖರ್ಗೆ ಅವರೇ ‘ಇಂಡಿಯಾ ವಿತ್‌ ರಾಹುಲ್‌ಗಾಂಧಿ’ ಎಂದು ಹೇಳುವ ಮುನ್ನ ನಿಮ್ಮ ತಂದೆಯನ್ನು ಇ.ಡಿ ತನಿಖೆ ಮಾಡಿದಾಗ ನಿಮ್ಮ ಕುಟುಂಬದ ಪರ ಯಾರೂ ನಿಲ್ಲಲಿಲ್ಲವೇಕೆ ಎಂಬುದನ್ನು ಯೋಚಿಸಿದ್ದೀರಾ? ನಿಮ್ಮ ತಂದೆಯ ಪರವಾಗಿ ಏಕೆ ಧ್ವನಿ ಎತ್ತಲಿಲ್ಲ. ಜನ್ಮದಾತನಿಗಿಂತಲೂ ನಿಮಗೆ ನಕಲಿ ಗಾಂಧಿಗಳೇ ಹೆಚ್ಚಾದರೇ’ ಎಂದೂ ಪ್ರಶ್ನಿಸಿದೆ.

ನಕಲಿ ಗಾಂಧಿಗಳ ಮೇಲಿನ ಅಕ್ಕರೆ ಕಾಂಗ್ರೆಸ್‌ನ ಹಿರಿಯ, ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಪರವಾಗಿ ಏಕಿಲ್ಲ? ರಾಜ್ಯದ ಕಾಂಗ್ರೆಸ್‌ ನಾಯಕರು ಖರ್ಗೆ ಪರವಾಗಿ ಏಕೆ ಧ್ವನಿ ಎತ್ತಲ್ಲಿಲ್ಲ. ಅವರಿಗಾಗಿ ಏಕೆ ಬೀದಿಗೆ ಇಳಿಯಲಿಲ್ಲ. ಅವರು ದಲಿತ ನಾಯಕ ಎಂಬ ಕಾರಣಕ್ಕೆ ಬೀದಿಗಳಿಯಲಿಲ್ಲವೇ? ಇದು ದಲಿತ ವಿರೋಧಿ ಧೋರಣೆ ಅಲ್ಲದೇ ಮತ್ತೇನು ಎಂದೂ ಬಿಜೆಪಿ ಕುಟುಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.