
ಬೆಂಗಳೂರು: 30 ಜಿಲ್ಲೆಗಳ 30 ಕಲಾವಿದರಿಗೆ ವಾರ್ಷಿಕ ಗೌರವ ಪ್ರಶಸ್ತಿ, ಇಬ್ಬರಿಗೆ ಜಾನಪದ ತಜ್ಞ ಪ್ರಶಸ್ತಿ, ಇಬ್ಬರಿಗೆ ಪುಸ್ತಕ ಪ್ರಶಸ್ತಿಯನ್ನು ಕರ್ನಾಟಕ ಜಾನಪದ ಅಕಾಡೆಮಿ ಪ್ರಕಟಿಸಿದೆ.
ಬೆಂಗಳೂರು ನಗರ ಜಿಲ್ಲೆಯ ಸಿದ್ದರಾಜು (ನೀಲಗಾರರ ಪದ, ತಂಬೂರಿ), ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಚ್ಚಮ (ಸೋಬಾನೆ), ಬೆಂಗಳೂರು ದಕ್ಷಿಣ ಜಿಲ್ಲೆಯ ಬಿ. ಸಿದ್ದರಾಜಯ್ಯ (ಜಾನಪದ ಗಾಯನ), ಕೋಲಾರ ಜಿಲ್ಲೆಯ ಸೀತಮ್ಮ (ತತ್ವಪದ & ಸೋಬಾನೆ), ಚಿಕ್ಕಬಳ್ಳಾಪುರ ಜಿಲ್ಲೆಯ ಕೆ.ಎಂ.ನಾರಾಯಣಸ್ವಾಮಿ (ಕೀಲು ಕುದುರೆ), ತುಮಕೂರು ಜಿಲ್ಲೆಯ ರೇವಣ್ಣ (ಅಲಗು ಕುಣಿತ), ದಾವಣಗೆರೆ ಜಿಲ್ಲೆಯ ಪರಮೇಶ್ವರಪ್ಪ ಕತ್ತಿಗೆ (ಏಕತಾರಿ ಪದಗಳು), ಚಿತ್ರದುರ್ಗ ಜಿಲ್ಲೆಯ ಜಿ.ಎನ್.ವಿರೂಪಾಕ್ಷಪ್ಪ (ಜಾನಪದ ಸಂಗೀತ), ಶಿವಮೊಗ್ಗ ಜಿಲ್ಲೆಯ ಕೆ.ಎಸ್.ಲಿಂಗಪ್ಪ (ಅಂಟಿಕೆ ಪಿಂಟಿಕೆ), ಮೈಸೂರು ಜಿಲ್ಲೆಯ ಚನ್ನಾಜಮ್ಮ (ಸೋಬಾನೆ ಪದ & ಜಾನಪದ ಗಾಯನ), ಮಂಡ್ಯ ಜಿಲ್ಲೆಯ ಹೊನ್ನಯ್ಯ (ಕೋಲಾಟ), ಹಾಸನ ಜಿಲ್ಲೆಯ ಯೋಗೇಂದ್ರ ದುದ್ದ (ಗೀಗೀ ಪದ & ಲಾವಣಿ, ಭಜನೆ)
ಚಿಕ್ಕಮಗಳೂರು ಜಿಲ್ಲೆಯ ರವಿ (ವೀರಗಾಸೆ), ಚಾಮರಾಜನಗರ ಜಿಲ್ಲೆಯ ಬಸವರಾಜು (ಗೊರುಕನ ನೃತ್ಯ), ದಕ್ಷಿಣ ಕನ್ನಡ ಜಿಲ್ಲೆಯ ಸಮತಿ ಕೊರಗ (ಕೊರಗರ ಡೋಲು), ಉಡುಪಿ ಜಿಲ್ಲೆಯ ಗುಲಾಬಿ ಗೌಡ್ತಿ (ನಾಟಿ ವೈದ್ಯೆ), ಕೊಡಗು ಜಿಲ್ಲೆಯ ಅಮ್ಮಣಿ (ಸೂಲಗಿತ್ತಿ, ಕುಡಿಯ ಜನಾಂಗದ ಹಾಡುಗಾರಿಕೆ), ಬೆಳಗಾವಿ ಜಿಲ್ಲೆಯ ಭೀಮಪ್ಪ ಸಿದ್ಧಪ್ಪ ಮುತ್ನಾಳ್ (ಪುರವಂತಿಕೆ), ಧಾರವಾಡ ಜಿಲ್ಲೆಯ (ಜಾನಪದ ನೃತ್ಯ), ವಿಜಯಪುರ ಜಿಲ್ಲೆಯ ಜ್ಯೋತಿರ್ಲಿಂಗ ಹೊನಕಟ್ಟಿ (ಜಾನಪದ ಗಾಯನ), ಬಾಗಲಕೋಟೆ ಜಿಲ್ಲೆಯ ಚಂದ್ರಲಿಂಗಪ್ಪ (ಪುರವಂತಿಕೆ), ಉತ್ತರ ಕನ್ನಡ ಜಿಲ್ಲೆಯ ಗೌರಿ ನಾಗಪ್ಪ (ಸಂಪ್ರದಾಯದ ಪದಗಳು), ಹಾವೇರಿ ಜಿಲ್ಲೆಯ ಭಿಕ್ಷಾಪತಿ ಸುಂಕಪ್ಪ (ಹಗಲುವೇಷ), ಗದಗ ಜಿಲ್ಲೆಯ ಕಾಶೀಮಸಾಬ ಹುಸೇನಸಾಬ (ಹೆಜ್ಜೆ ಮೇಳೆ), ಕಲಬುರಗಿ ಜಿಲ್ಲೆಯ ಭಾಗಪ್ಪ (ಜಾನಪದ ಗಾಯನ), ಬೀದರ್ ಜಿಲ್ಲೆಯ ಇಂದ್ರಮ್ಮ (ಮೊಹರಂ ಪದ), ರಾಯಚೂರು ಜಿಲ್ಲೆಯ ಯಂಕನಗೌಡ (ತತ್ವಪದ & ಜಾನಪದ ಗಾಯನ), ಕೊಪ್ಪಳ ಜಿಲ್ಲೆಯ ರಾಮಣ್ಣ (ಹಗಲುವೇಷ), ವಿಜಯನಗರ ಜಿಲ್ಲೆಯ ಕಿಂಡ್ರಿ ಲಕ್ಷ್ಮೀಪತಿ, ಯಾದಗಿರಿ ಜಿಲ್ಲೆಯ ಹನುಮಂತ (ರಿವಾಯತ್ ಪದಗಳು)
ತಜ್ಞ ಪ್ರಶಸ್ತಿ: ಜೀ.ಶಂ.ಪ ತಜ್ಞ ಪ್ರಶಸ್ತಿಗೆ ತುಮಕೂರು ಜಿಲ್ಲೆಯ ಚಿಕ್ಕಣ್ಣ ಯಣ್ಣೆಕಟ್ಟೆ ಹಾಗೂ ಬಿ.ಎಸ್. ಗದ್ದಗಿಮಠ ತಜ್ಞ ಪ್ರಶಸ್ತಿಗೆ ಕಲಬುರಗಿ ಎಚ್.ಟಿ.ಪೋತೆ ಅವರನ್ನು ಆಯ್ಕೆ ಮಾಡಲಾಗಿದೆ.
ಪುಸ್ತಕ ಬಹುಮಾನ: 2024ರ ಸಾಲಿನಲ್ಲಿ ಡಾ.ಇಮಾಮ್ ಸಾಹೇಬ್ ಹಡಗಲಿ ಅವರ ಕನಕಗಿರಿ ಸೀಮೆಯ ಸ್ಥಳ ನಾಮಗಳು, ಡಾ.ಮೀರಾಸಾಬಿಹಳ್ಳಿ ಶಿವಣ್ಣ ಅವರ ಕಾಡುಗೊಲ್ಲರ ಸಂಸ್ಕೃತಿ ಮತ್ತು ಕಾವ್ಯಗಳನ್ನು ಪುಸ್ತಕ ಬಹುಮಾನಕ್ಕೆ ಆಯ್ಕೆ ಮಾಡಲಾಗಿದೆ.
ವಾರ್ಷಿಕ ಗೌರವ ಪ್ರಶಸ್ತಿಯು ತಲಾ ₹ 25,000, ತಜ್ಞ ಪ್ರಶಸ್ತಿಯು ತಲಾ ₹ 50,000, ಪುಸ್ತಕ ಪ್ರಶಸ್ತಿಯು ತಲಾ ₹ 25,000 ನಗದು, ಸ್ಮರಣಿಕೆ ಹೊಂದಿರುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.