ಬೆಂಗಳೂರು: ಕನ್ನಡ ಚಿತ್ರರಂಗ ಖ್ಯಾತ ಕಲಾವಿದರಾದ ಸಹಸ ಸಿಂಹ ಖ್ಯಾತಿಯ ವಿಷ್ಣುವರ್ಧನ್ ಹಾಗೂ ಬಿ. ಸರೋಜಾದೇವಿಯವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿಯನ್ನು ಮರಣೋತ್ತರವಾಗಿ ನೀಡುವುದಾಗಿ ರಾಜ್ಯ ಸಚಿವ ಸಂಪುಟದಲ್ಲಿ ತೀರ್ಮಾನಿಸಲಾಗಿದೆ.
ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ವಿಷ್ಣುವರ್ಧನ್ ಅವರಿಗೆ ಕರ್ನಾಟಕ ರತ್ನ ನೀಡಬೇಕು ಎಂದು ನಟಿಯರ ನಿಯೋಗವೊಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇತ್ತೀಚೆಗೆ ಭೇಟಿ ಮಾಡಿ ಮನವಿ ಮಾಡಿತ್ತು. ಇದೀಗ ಅವರ ಜೊತೆಗೆ ಈ ವರ್ಷ ಅಗಲಿದ ಸರೋಜಾದೇವಿಯವರಿಗೂ ಕರ್ನಾಟಕ ರತ್ನ ಪ್ರಶಸ್ತಿಯನ್ನು ಸರ್ಕಾರ ಘೋಷಣೆ ಮಾಡಿದೆ.
ಈವರೆಗೆ ಕರ್ನಾಟಕ ರತ್ನ ಪ್ರಶಸ್ತಿ ಪಡೆದವರ ಪಟ್ಟಿ ಇಲ್ಲಿದೆ.
ವರ್ಷ | ಪ್ರಶಸ್ತಿ ಪುರಸ್ಕೃತರು | ಕ್ಷೇತ್ರ |
---|---|---|
1992 | ಕುವೆಂಪು | ಸಾಹಿತ್ಯ |
1992 | ರಾಜ್ ಕುಮಾರ್ | ಸಿನಿಮಾ |
1999 | ಎಸ್. ನಿಜಲಿಂಗಪ್ಪ | ರಾಜಕೀಯ |
2000 | ಸಿ.ಎನ್.ಆರ್ ರಾವ್ | ವಿಜ್ಞಾನ |
2001 | ದೇವಿ ಶೆಟ್ಟಿ | ವೈದ್ಯಕೀಯ |
2005 | ಭೀಮಸೇನ್ ಜೋಶಿ | ಸಂಗೀತ |
2007 | ಶಿವಕುಮಾರ ಸ್ವಾಮಿಜಿ | ಸಮಾಜ ಸೇವೆ |
2008 | ಜವರೇಗೌಡ | ಶಿಕ್ಷಣ ಹಾಗೂ ಸಾಹಿತ್ಯ |
2009 | ವಿರೇಂದ್ರ ಹೆಗ್ಗಡೆ | ಸಮಾಜ ಸೇವೆ |
2002 | ಪುನೀತ್ ರಾಜ್ ಕುಮಾರ್ (ಮರಣೋತ್ತರವಾಗಿ) | ಸಿನಿಮಾ ಹಾಗೂ ಸಮಾಜ ಸೇವೆ |
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.