ADVERTISEMENT

KSRP ನೇಮಕಾತಿ | ಪಿಯು ವಿದ್ಯಾರ್ಹತೆ: ನಿಯಮ ತಿದ್ದುಪಡಿಗೆ ಸಂಪುಟದ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 23:30 IST
Last Updated 30 ಅಕ್ಟೋಬರ್ 2025, 23:30 IST
<div class="paragraphs"><p>ಕೆಎಸ್‌ಆರ್‌ಪಿ ಮಹಿಳಾ ಸಿಬ್ಬಂದಿ</p></div>

ಕೆಎಸ್‌ಆರ್‌ಪಿ ಮಹಿಳಾ ಸಿಬ್ಬಂದಿ

   

ಪ್ರಜಾವಾಣಿ ಚಿತ್ರ / ಎಂ.ಎಸ್.ಮಂಜುನಾಥ್

ಬೆಂಗಳೂರು: ಕರ್ನಾಟಕ ರಾಜ್ಯ ಮೀಸಲು ಪೊಲೀಸ್‌ (ಕೆಎಸ್‌ಆರ್‌ಪಿ) ಮತ್ತು ಭಾರತೀಯ ಮೀಸಲು ದಳ (ಐಆರ್‌ಬಿ) ನೇಮಕಾತಿಗೆ ಇರುವ ವಿದ್ಯಾರ್ಹತೆಯನ್ನು ಎಸ್‌ಎಸ್‌ಎಲ್‌ಸಿಯಿಂದ ಪಿಯುಸಿಗೆ ಏರಿಸುವ ವೃಂದ ಮತ್ತು ನೇಮಕಾತಿ ನಿಯಮಕ್ಕೆ ಮಾಡಿರುವ ತಿದ್ದುಪಡಿಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ADVERTISEMENT

ಸಚಿವ ಸಂಪುಟ ಸಭೆಯ ಬಳಿಕ ಕಾನೂನು ಸಚಿವ ಎಚ್‌.ಕೆ.ಪಾಟೀಲ ಅವರು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.

ಸಚಿವ ಸಂಪುಟ ಸಭೆಯ ತೀರ್ಮಾನಗಳು:

  • ಕರ್ನಾಟಕ ನವೋದ್ಯಮ ನೀತಿ 2022–27ರ ಅಡಿ ಐದು ವರ್ಷಗಳ ಅವಧಿಗೆ ₹80 ಕೋಟಿ ಅನುದಾನ ಹಂಚಿಕೆಯೊಂದಿಗೆ ಒಟ್ಟು ಎಂಟು ಟೆಕ್ನಾಲಜಿ ಇನ್‌ಕ್ಯುಬೇಟರ್‌ 2.0 ಸ್ಥಾಪಿಸಲು ತೀರ್ಮಾನ.

  • ಕಾರವಾರ, ಹಳೆ ಮಂಗಳೂರು(ಬೆಂಗ್ರೆ), ಹಳೆ ಮಂಗಳೂರು(ನಗರ ಬದಿ) ಮತ್ತು ಮಲ್ಪೆಯ ಬರ್ತ್‌ಗಳನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಿ ನಿರ್ವಹಿಸಲು ತೀರ್ಮಾನ

  • ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರಾಥಮಿಕ ಹಂತಕ್ಕಾಗಿ ₹23.25 ಕೋಟಿ ಮೊತ್ತದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ, ದುರಸ್ತಿ ಮತ್ತು ನವೀಕರಣ ಕಾಮಗಾರಿ

  • ಕಾರವಾರ ಕ್ಯಾನ್ಸರ್‌ ಕೇರ್ ಘಟಕದ ಸ್ಥಾಪನೆಗೆ ಅಗತ್ಯವಿರುವ ಹೆಚ್ಚುವರಿ ಉಪಕರಣಗಳಿಗೆ ತಗಲುವ ಅನುದಾನವನ್ನು ಈಗಾಗಲೇ ಅನುಮೋದನೆ ಆಗಿರುವ ₹18.25 ಕೋಟಿ ಸರ್ಕಾರದ ವತಿಯಿಂದ ಭರಿಸಲಾಗುವುದು. ಇನ್ನುಳಿದ ಮೊತ್ತ ₹13.38 ಕೋಟಿಯನ್ನು ಸಂಸ್ಥೆಯ ಆಂತರಿಕ ಸಂಪನ್ಮೂಲದಿಂದ ಭರಿಸಲು ಒಪ್ಪಿಗೆ.

  • ತುಮಕೂರು ಜಿಲ್ಲಾ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ ಕೇರ್‌ ಕೇಂದ್ರ ಸ್ಥಾಪನೆಗೆ ಅಗತ್ಯವಿರುವ ಮೊದಲ ಹಂತದ ಉಪಕರಣಗಳ ಖರೀದಿಗೆ ₹50 ಕೋಟಿ.

  • ಕೆ–ಶೋರ್ ಯೋಜನೆಗೆ ತಾಂತ್ರಿಕ ಮತ್ತು ನಿರ್ವಹಣಾ ಸಲಹೆಗಾರರ ಸೇವೆಗಳನ್ನು ಪಡೆಯಲು ₹20.47 ಕೋಟಿಗೆ ಆಡಳಿತಾತ್ಮಕ ಅನುಮೋದನೆ.

  • ಯಾದಗಿರಿ ಜಿಲ್ಲೆ ಶಹಾಪುರ ನಗರಸಭೆ ವ್ಯಾಪ್ತಿಯಲ್ಲಿ ಕನಕಭವನ ನಿರ್ಮಾಣಕ್ಕೆ 300.14 ಚದರ ಮೀಟರ್‌ ಕರ್ನಾಟಕ ಪ್ರದೇಶ ಕುರುಬರ ಸಂಘಕ್ಕೆ ಉಚಿತವಾಗಿ ಮಂಜೂರು ಮಾಡಲು ತೀರ್ಮಾನ

  • 2025–26 ನೇ ಸಾಲಿನಲ್ಲಿ ಪೊಲೀಸ್ ಇಲಾಖೆಗೆ ವಿವಿಧ ಮಾದರಿಯ 241 ವಾಹನಗಳನ್ನು ₹34.95 ಕೋಟಿ ವೆಚ್ಚದಲ್ಲಿ ಖರೀದಿಸಲು ಒಪ್ಪಿಗೆ

  • ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ, ಉಡುಪಿ ಜಿಲ್ಲೆ ಅಂಜಾರು ಗ್ರಾಮ, ಉಡುಪಿ ಜಿಲ್ಲೆ ಕುಂದಾಪುರ ತಾಲ್ಲೂಕಿನಲ್ಲಿ ಕಾಂಗ್ರೆಸ್‌ ಭವನ ನಿರ್ಮಾಣಕ್ಕೆ ಜಮೀನು ಮಂಜೂರು