ಬೆಂಗಳೂರು: ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆಯುವ ದ್ವೈವಾರ್ಷಿಕ ಚುನಾವಣೆಯಲ್ಲಿ ಜೆಡಿಎಸ್ ಟಿಕೆಟ್ ಪಡೆಯುವಲ್ಲಿ ಕೋಲಾರದ ಉದ್ಯಮಿ ನಿಸರ್ಗ ಗೋವಿಂದರಾಜ್ ಸಫಲರಾಗಿದ್ದಾರೆ.
ಪಕ್ಷದ ವರಿಷ್ಢ ಎಚ್. ಡಿ.ದೇವೇಗೌಡ ಅವರು ಗೋವಿಂದರಾಜ್‌ಗೆ ಬಿ ಫಾರಂ ನೀಡಿದ್ದು, ಗುರುವಾರ ಬೆಳಿಗ್ಗೆ 11.30ಕ್ಕೆ ನಾಮಪತ್ರ ಸಲ್ಲಿಸಲಿದ್ದಾರೆ.
ಟಿ.ಎ.ಶರವಣ ಅವರಿಂದ ತೆರವಾಗುತ್ತಿರುವ ಸ್ಥಾನವನ್ನು ಗೋವಿಂದರಾಜ್ ತುಂಬಲಿದ್ದಾರೆ. ಶರವಣ ಅವರಲ್ಲದೆ, ಕುಪೇಂದ್ರ ರೆಡ್ಡಿ ಮತ್ತು ಕಬಡ್ಡಿ ಬಾಬು ಟಿಕೆಟ್‌ಗಾಗಿ ಭಾರಿ ಪ್ರಯತ್ನ ನಡೆಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.