ADVERTISEMENT

ರಾಜ್ಯಕ್ಕೆ 3 ರೈಲ್ವೆ ಮೇಲ್ಸೇತುವೆ ಮಂಜೂರು ಮಾಡಿದ ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 11 ಜನವರಿ 2025, 14:25 IST
Last Updated 11 ಜನವರಿ 2025, 14:25 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ಕರ್ನಾಟಕಕ್ಕೆ ಮೂರು ರೈಲ್ವೆ ಮೇಲ್ಸೇತುವೆಗಳನ್ನು ರೈಲ್ವೆ ಸಚಿವಾಲಯ ಶುಕ್ರವಾರ ಮಂಜೂರು ಮಾಡಿದೆ. ಮೇಲ್ಸೇತುವೆಗಳ ನಿರ್ಮಾಣಕ್ಕೆ ₹101.47 ಕೋಟಿ ಅನುದಾನ ನೀಡಲಾಗುತ್ತದೆ.  

ಹೊಳೆನರಸೀಪುರದ ಅಕ್ಕಿಹೆಬ್ಬಾಳು–ಮಂಡಗೆರೆ (₹15.69 ಕೋಟಿ), ಮಂಡಗೆರೆ–ಹೊಳೆನರಸೀಪುರ (₹15.93 ಕೋಟಿ, ಕಡೂರು ಜಂಕ್ಷನ್‌–ಬಿರೂರು ಜಂಕ್ಷನ್‌ (₹69.85 ಕೋಟಿ) ನಡುವೆ ಈ ರೈಲ್ವೆ ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಲಾಗುತ್ತದೆ. ಈ ಯೋಜನೆಗಳನ್ನು ವಿಶೇಷ ರೈಲ್ವೆ ಯೋಜನೆಗಳೆಂದು ಪರಿಗಣಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.