ADVERTISEMENT

ಮಂತ್ರಾಲಯದಲ್ಲಿ ಆರ್‌ಎಸ್‌ಎಸ್‌ ಬೈಠಕ್, ರಾಘವೇಂದ್ರರ ದರ್ಶನ ಪಡೆದ ಮೋಹನ್ ಭಾಗವತ್‌

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 5:10 IST
Last Updated 31 ಆಗಸ್ಟ್ 2018, 5:10 IST
ಮಂತ್ರಾಲಯದಲ್ಲಿ ಆರ್‌ಎಸ್‌ಎಸ್‌ ಬೈಠಕ್ನಲ್ಲಿ ಫಾಲ್ಗೊಳ್ಳಲು ಬಂದಿರುವ ಸರಸಂಘಚಾಲಕ ಮೋಹನ್ ಭಾಗವತ್ ಅವರು ರಾಘವೇಂದ್ರ ಸ್ವಾಮಿ ದರ್ಶನ ಪಡೆದರು.
ಮಂತ್ರಾಲಯದಲ್ಲಿ ಆರ್‌ಎಸ್‌ಎಸ್‌ ಬೈಠಕ್ನಲ್ಲಿ ಫಾಲ್ಗೊಳ್ಳಲು ಬಂದಿರುವ ಸರಸಂಘಚಾಲಕ ಮೋಹನ್ ಭಾಗವತ್ ಅವರು ರಾಘವೇಂದ್ರ ಸ್ವಾಮಿ ದರ್ಶನ ಪಡೆದರು.   

ರಾಯಚೂರು:ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರ್‌ಎಸ್‌ಎಸ್) ಪರಿವಾರದ ರಾಷ್ಟ್ರೀಯ ಪದಾಧಿಕಾರಿಗಳ ಬೈಠಕ್ಮಂತ್ರಾಲಯದ ಟಿಟಿಡಿ ಕಲ್ಯಾಣ ಮಂಟಪದಲ್ಲಿಶುಕ್ರವಾರ ಆರಂಭವಾಗಿದ್ದು, ಸೆಪ್ಟೆಂಬರ್‌ 2 ರವರೆಗೂ ನಡೆಯಲಿದೆ.

ಸರಸಂಘಚಾಲಕ ಮೋಹನ್ ಭಾಗವತ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತಾ ಶಾ ಸೇರಿದಂತೆ ಪರಿವಾರ ಸಂಘಟನೆಗಳ ಮುಖ್ಯಸ್ಥರು ಬೈಠಕ್ ನಲ್ಲಿ ಭಾಗಿಯಾಗಿದ್ದಾರೆ.

ಭಾಗವತ್ ಅವರಿಗೆ ಝಡ್ ಪ್ಲಸ್ ಸೆಕ್ಯುರಿಟಿ ಇರುವುದರಿಂದ ಬೈಠಕ್ ನಡೆಯುವ ಕಲ್ಯಾಣ ಮಂಟಪ ಸುತ್ತಮುತ್ತ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಸ್ಥಳೀಯ ಆಂಧ್ರಪ್ರದೇಶ ಪೊಲೀಸರೂ ಬಂದೋಬಸ್ತ್‌ನಲ್ಲಿ ಇದ್ದಾರೆ.

ADVERTISEMENT

ಮೂರು ದಿನಗಳಿಂದ ರಾಯಚೂರಿನಲ್ಲಿ ಉಳಿದುಕೊಂಡಿದ್ದ ಮೋಹನ್ ಭಾಗವತ್ ಅವರು ಗುರುವಾರ ರಾತ್ರಿ ಮಂತ್ರಾಲಯಕ್ಕೆ ಬಂದಿದ್ದು, ಶುಕ್ರವಾರ ಬೆಳಿಗ್ಗೆ ಶ್ರೀರಾಘವೇಂದ್ರ ಸ್ವಾಮಿ ಮಠದ ದರ್ಶನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.