ADVERTISEMENT

ಸದನದಲ್ಲಿ ಆಕ್ಷೇಪಾರ್ಹ ಪದ ಬಳಸಿದ ಈಶ್ವರಪ್ಪ, ಆಡಳಿತ ಪಕ್ಷ ಸದಸ್ಯರಿಂದ ಗದ್ದಲ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 14:38 IST
Last Updated 11 ಫೆಬ್ರುವರಿ 2019, 14:38 IST
   

ಬೆಂಗಳೂರು:ಆಡಿಯೊ ತನಿಖೆಯನ್ನು ಎಸ್‌ಐಟಿಗೆ ವಹಿಸುವುದರ ಕುರಿತುಟೀಕಿಸುವ ವೇಳೆಬಿಜೆಪಿ ಶಾಸಕ ಕೆ.ಎಸ್‌.ಈಶ್ವರಪ್ಪ ಅವರು ವಿಧಾನಸಭೆ ಕಲಾಪದಲ್ಲಿ ಆಕ್ಷೇಪಾರ್ಹ ಪದ ಬಳಸಿದರು.

‘ಸದನ ಸಮಿತಿ ರನಚೆ ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿದ ಸಭಾಧ್ಯಕ್ಷ ರಮೇಶ್‌ಕುಮಾರ್‌, ‘ಸಮಯದ ಕಾರಣ 15 ದಿನಗಳ ಒಳಗೆ ತನಿಖೆ ಆಗಬೇಕು ಎಂಬ ಉದ್ದೇಶದಿಂದ ಎಸ್‌ಐಟಿಗೆ ನೀಡುವಂತೆ ಸಿಎಂಗೆ ಹೇಳಿದ್ದೇನೆ. ನ್ಯಾಯಾಂಗ ತನಿಖೆಯಿಂದ ಬೇಗ ಬಗೆಹರಿಯುವುದಿಲ್ಲ. 15 ದಿನಗಳ ಒಳಗೆ ತನಿಖೆ ಮುಗಿದು ನನ್ನ ತಲೆ ಮೇಲಿರುವ ಭಾರವನ್ನು ಇಳಿಸಿಕೊಂಡು ನಿರಾಳವಾಗಬೇಕು ಎಂಬ ಉದ್ದೇಶದಿಂದ ಎಸ್‌ಐಟಿಗೆ ನೀಡಲು ಸೂಚಿಸಿದ್ದೇನೆ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

ಇದಾದ ಬಳಿಕ ಮಾತನಾಡಿದ ಈಶ್ವರಪ್ಪ ಅವರು, ‘ನೀವು ಸದನ ಸಮಿತಿಗೊ ಅಥವಾ ನ್ಯಾಯಾಂಗ ತನಿಖೆಗೆ ವಹಿಸುತ್ತೀರಿ ಎಂದು ನಾವು ಭಾವಿಸಿದ್ದೆವು. ಸಭಾಧ್ಯಕ್ಷ ಪೀಠಕ್ಕೆ ಗೌರವ ಕೊಟ್ಟೆವು. ಈಗ ಎಸ್‌ಐಟಿಗೆ ವಹಿಸಿದರೆ ಹೇಗೆ?’ ಎಂದು ಟೀಕಿಸಿದರು. ಈ ವೇಳೆ ಅವರುಆಕ್ಷೇಪಾರ್ಹ ಪದವೊಂದನ್ನುಬಳಸಿದರು.

ತಕ್ಷಣ ಸಭಾಧ್ಯಕ್ಷರು ಆ ಪದ ಬಳಸದಂತೆ ಸೂಚನೆ ನೀಡಿದರು.

ಕಲಾಪ ನಾಳೆಗೆ

ಎಲ್ಲಾ ಬೆಳವಣಿಗೆಗಳ ನಡುವೆ ಸದನದಲ್ಲಿ ಆಡಳಿತ ಮತ್ತು ವಿಪಕ್ಷ ಸದಸ್ಯರು ಆರೋಪ ಪ್ರತ್ಯಾರೋಪಕ್ಕೆ ತೊಡಗಿದರು. ಸದನದಲ್ಲಿ ಗದ್ದಲ ಉಂಟಾಗಯಿತು. ಇದರಿಂದ ಸಭಾಧ್ಯಕ್ಷರು ಕಲಾಪವನ್ನು ನಾಳೆಗೆ ಮುಂದೂಡಿದರು.

* ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.