ADVERTISEMENT

16 ಫೆಬ್ರುವರಿ 2026: ಈ ದಿನದ ಟಾಪ್ 10 ಸುದ್ದಿಗಳು ಇಲ್ಲಿವೆ..

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2026, 15:29 IST
Last Updated 16 ಫೆಬ್ರುವರಿ 2026, 15:29 IST
   

ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ ವಿಷಯಗಳಿಗೆ ಸಂಬಂಧಪಟ್ಟಂತೆ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ಬಾಗೇಪಲ್ಲಿ ಕಾಂಗ್ರೆಸ್ ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧು: ಹೈಕೋರ್ಟ್ ತೀರ್ಪು

ಬೆಂಗಳೂರು: ಚುನಾವಣಾ ಅಕ್ರಮಗಳ ಹಿನ್ನೆಲೆಯಲ್ಲಿ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರ ಆಯ್ಕೆಯನ್ನು ಹೈಕೋರ್ಟ್ ಅಸಿಂಧುಗೊಳಿಸಿದೆ.

ತಾರಿಕ್ ರೆಹಮಾನ್: ಬಾಂಗ್ಲಾ ಪ್ರಧಾನಿಯಾಗುತ್ತಿದ್ದಂತೆ ಭಾರತದಿಂದ ಆಹ್ವಾನ!

ನವದೆಹಲಿ: ಕಳೆದ 18 ತಿಂಗಳಿನಿಂದ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಸಂಬಂಧ ಹದಗೆಟ್ಟಿದೆ. ಉಭಯ ದೇಶಗಳ ನಡುವೆ ಹೊಸ ಸುಧಾರಣೆಗೆ ತರಲು ಭಾರತ ಉತ್ಸುಕವಾಗಿದೆ. ಈ ಹಿನ್ನೆಲೆ, ಬಾಂಗ್ಲಾದೇಶ ರಾಷ್ಟ್ರೀಯ ಪಕ್ಷದ ಮುಖ್ಯಸ್ಥ ತಾರಿಕ್ ರೆಹಮಾನ್ ಅವರು ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ, ಅವರನ್ನು ಭಾರತಕ್ಕೆ ಆಹ್ವಾನಿಸುವ ಸಾಧ್ಯತೆ ಇದೆ.

ADVERTISEMENT

ಅಸ್ಸಾಂ ಚುನಾವಣೆಗೂ ಮುನ್ನ ಕಾಂಗ್ರೆಸ್‌ಗೆ ಆಘಾತ: ಭೂಪೇನ್‌ ಬೋರಾ ರಾಜೀನಾಮೆ

ಗುವಾಹಟಿ: ಅಸ್ಸಾಂ ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಾಗಲೇ ಕಾಂಗ್ರೆಸ್‌ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಭೂಪೇನ್‌ ಕುಮಾರ್‌ ಬೋರಾ ರಾಜೀನಾಮೆ ಸಲ್ಲಿಸಿದ್ದಾರೆ.

Video| ಹಸ್ತಲಾಘವ ವಿವಾದ: ವಾಸಿಂ ಅಕ್ರಂಗೆ ರೋಹಿತ್ ಶರ್ಮಾ ಅಪ್ಪುಗೆ

ಕೊಲೊಂಬೊ: ಇಲ್ಲಿನ ಆರ್. ಪ್ರೇಮದಾಸ ಕ್ರಿಕೆಟ್ ಮೈದಾನದಲ್ಲಿ ಮುಕ್ತಾಯಗೊಂಡ ಟಿ20 ವಿಶ್ವಕಪ್‌ನ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಭಾರತ ತಂಡವು ಗೆಲ್ಲುವ ಮೂಲಕ ಸೂಪರ್ 8ರ ಹಂತಕ್ಕೆ ಲಗ್ಗೆ ಇಟ್ಟಿದೆ. ಇನ್ನೂ ನಿನ್ನೆ (ಭಾನುವಾರ) ನಡೆದ ಪಂದ್ಯದಲ್ಲಿ ಕೂಡ ಭಾರತ ಹಾಗೂ ಪಾಕಿಸ್ತಾನ ತಂಡದ ಆಟಗಾರರ ನಡುವೆ ಹಸ್ತಲಾಘವ ಇರಲಿಲ್ಲ.

RSS ಬಗ್ಗೆ 6 ತಿಂಗಳು ಅಧ್ಯಯನ ಮಾಡಿ, ಬಳಿಕ ಮಾತನಾಡಿ: ಪ್ರಿಯಾಂಕ್ ವಿರುದ್ಧ ಬಿವೈವಿ

ಬೆಂಗಳೂರು: ಆರ್‌ಎಸ್‌ಎಸ್‌ ಕುರಿತು ಸದಾ ತಲೆಹರಟೆ ಮತ್ತು ಉಡಾಫೆ ಮಾತುಗಳನ್ನಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರು ನಾಗಪುರಕ್ಕೆ ಬಂದು ಆರು ತಿಂಗಳು ಆರ್‌ಎಸ್‌ಎಸ್‌ ಕುರಿತು ಅಧ್ಯಯನ ಮಾಡಿ, ಆ ಬಳಿಕ ಮಾತನಾಡಲಿ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.

₹400 ಕೋಟಿ ಲೂಟಿ ಪ್ರಕರಣವೇ ನಡೆದಿಲ್ಲ; ಎಲ್ಲ ಬರೀ ಕತೆ ಎಂದ ಪೊಲೀಸರು

ನಾಸಿಕ್: ‘ನಗದು ಸಾಗಿಸುತ್ತಿದ್ದ ಟ್ರಕ್‌ ತಡೆದು ₹400 ಕೋಟಿ ದೋಚಿ ಪರಾರಿಯಾಗಿದ್ದಾರೆ ಎಂದು ಚಾಲಕನೊಬ್ಬ ಸಲ್ಲಿಸಿದ್ದ ದೂರು ಸುಳ್ಳು, ಅಂತಹ ಯಾವುದೇ ಪ್ರಕರಣ ನಡೆದಿಲ್ಲ’ ಎಂದು ಮಹಾರಾಷ್ಟ್ರದ ನಾಸಿಕ್ ಗ್ರಾಮೀಣ ಪೊಲೀಸರು ಸೋಮವಾರ ತಿಳಿಸಿದ್ದಾರೆ.

ತಾರಿಕ್ ರೆಹಮಾನ್ ಪದಗ್ರಹಣ ಸಮಾರಂಭಕ್ಕೆ ಮೋದಿ ಯಾಕಾಗಿ ಹೋಗ್ತಿಲ್ಲ; ಇಲ್ಲಿದೆ ಕಾರಣ

ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಅವರು ಮಂಗಳವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಸಮಾರಂಭಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಾಂಗ್ಲಾದೇಶ ರಾಷ್ಟ್ರೀಯ ಪಕ್ಷ (ಬಿಎನ್‌ಪಿ) ಆಹ್ವಾನ ನೀಡಿತ್ತು. ಆದರೆ, ಮೋದಿಯವರು ಕಾರ್ಯಕ್ರಮಕ್ಕೆ ಹೋಗುತ್ತಿಲ್ಲ ಎಂದು ಭಾರತ ಸರ್ಕಾರ ಮಾಹಿತಿ ನೀಡಿದೆ.

ರಣಜಿ ಟ್ರೋಫಿ|ಪಡಿಕ್ಕಲ್ ದ್ವಿಶತಕ, ಸ್ಮರಣ್ ಶತಕ: ಬೃಹತ್ ಮೊತ್ತ ಕಲೆಹಾಕಿದ ಕರ್ನಾಟಕ

ಲಖನೌ: ನಾಯಕ ದೇವದತ್ತ ಪಡಿಕ್ಕಲ್ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ಚೊಚ್ಚಲ ದ್ವಿಶತಕ ದಾಖಲಿಸಿದರು. ಸ್ಮರಣ್ ರವಿಚಂದ್ರನ್  ಅಜೇಯ ಶತಕ ಗಳಿಸಿದರು. ಇದರೊಂದಿಗೆ ಇಲ್ಲಿ ನಡೆಯುತ್ತಿರುವ ರಣಜಿ ಟ್ರೋಫಿ ಸೆಮಿಫೈನಲ್‌ನಲ್ಲಿ ಸತತ ಎರಡನೇ ದಿನವೂ ಕರ್ನಾಟಕ ಪಾರಮ್ಯ ಮೆರೆದು ರನ್‌ಗಳ ಬೆಟ್ಟವನ್ನೇ ನಿರ್ಮಿಸಿದೆ. 

ಆತ್ಮ ನಿರ್ಭರವೋ-ಅಮೆರಿಕ ನಿರ್ಭರವೋ: ಕೇಂದ್ರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ನವದೆಹಲಿ: ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ದೇಶವನ್ನು ‘ಆತ್ಮ ನಿರ್ಭರ’ದ (ಸ್ವಾವಲಂಬಿ) ಬದಲಿಗೆ ‘ಅಮೆರಿಕ ನಿರ್ಭರ’ (ಅಮೆರಿಕ ಅವಲಂಬಿತ) ಮಾಡಿದೆ. ಇದು ರೈತರ ಜೀವನೋಪಾಯದ ಮೇಲಿನ ದಾಳಿಯಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಪ್ರತಿದಿನ ₹300 ಕೋಟಿ ಸಾಲ ಮಾಡುತ್ತಿರುವುದೇ ರಾಜ್ಯ ಸರ್ಕಾರದ ಸಾಧನೆ: ನಿಖಿಲ್ ಕಿಡಿ

ವಿಜಯಪುರ: ‘ಸಾವಿರ ದಿನದ ಸರ್ಕಾರ ಎಂದು ಸಂಭ್ರಮಾಚರಣೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಡಳಿತದಲ್ಲಿ ಪ್ರತಿ ವರ್ಷ ₹1 ಲಕ್ಷ ಕೋಟಿ ಸಾಲ ಮಾಡಲಾಗುತ್ತಿದೆ. ಪ್ರತಿ ದಿನಕ್ಕೆ ₹ 300 ಕೋಟಿ ಸಾಲ ಆಗ್ತಿದೆ. ಇಂದಿನ‌ ರಾಜ್ಯದ ಮುಖ್ಯಮಂತ್ರಿಗಳ ಆಡಳಿತ ವೈಖರಿ ಪ್ರತಿ ವರ್ಷ ಕೂಡ ₹ 1 ಲಕ್ಷ ಕೋಟಿ ಸಾಲದಲ್ಲಿದೆ. ಇಲ್ಲಿಯವರೆಗೆ ₹ 7 ಲಕ್ಷ ಕೋಟಿ ಸಾಲ ಮಾಡಿದೆ. ಈ ಸಾಲದ ಹೊರೆ ನಮ್ಮ ತಲೆಯ ಮೇಲೆ ಹಾಕುತ್ತಿದ್ದಾರೆ. ನಮ್ಮ ಮೇಲೆ ಸಾಲ ಹೊರೆಸುತ್ತಿರುವುದೇ ನಮಗೆ ಕೊಟ್ಟ ರಾಜ್ಯ ಸರ್ಕಾರದ ದೊಡ್ಡ ಕೊಡುಗೆಯಾಗಿದೆ’ ಎಂದು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.