ADVERTISEMENT

ಜನ ವಿರೋಧಿ ಕಾನೂನು ಮಾಡಿದರೆ ಹಿಟ್ಲರ್ ಸರ್ಕಾರ ಎನಿಸಿಕೊಳ್ಳುತ್ತದೆ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 26 ಜೂನ್ 2023, 9:23 IST
Last Updated 26 ಜೂನ್ 2023, 9:23 IST
   

ಬೆಂಗಳೂರು: ಯಾವುದೆ ಸರ್ಕಾರ ಇರಲಿ. ಜನರಿಗೆ ಮಾರಕವಾದ, ಸಂವಿಧಾನ ವಿರೋಧಿಯಾದ ಕಾನೂನು ಮಾಡಬಾರದು. ಹಾಗೆ ಮಾಡಿದರೆ ಅದು ಹಿಟ್ಲರ್ ಆಡಳಿತ ಎನಿಸಿಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನೆಲಮಂಗಲದ ಎಸ್‌ಡಿಎಂ ಕ್ಷೇಮವನದಲ್ಲಿ ನೂತನ ಶಾಸಕರಿಗೆ ಹಮ್ಮಿಕೊಂಡಿದ್ದ ಪುನಶ್ಚೇತನ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.

ಮನುಷ್ಯನಿಗೆ ಶ್ರೇಷ್ಠತೆಯ ಗೀಳು ಒಳ್ಳೆಯದಲ್ಲ. ಅಂತಹ ಗೀಳು ಇದ್ದ ಹಿಟ್ಲರ್ ಕೊನೆಗೆ ಆತ್ಮಹತ್ಯೆ ಮಾಡಿಕೊಂಡ. ಪ್ರಜಾಪ್ರಭುತ್ವ ವ್ಯವಸ್ಥೆಯ ಸರ್ಕಾರಗಳು ಜನರಿಗೆ ಪೂರಕವಾದ ಕಾನೂನು ಜಾರಿಗೆ ತರಬೇಕು. ಮಾರಕವಾದ ಕಾನೂನು ಬದಲಿಸಬೇಕು.
– ಸಿದ್ದರಾಮಯ್ಯ, ಸಿಎಂ

ಈಚಿನ ವರ್ಷಗಳಲ್ಲಿ ಚುನಾವಣೆಗಳು ದುಬಾರಿಯಾಗುತ್ತಿವೆ. ಅರ್ಹರು, ಪ್ರಾಮಾಣಿಕರು ಆಯ್ಕೆಯಾಗುವುದು ವಿರಳವಾಗುತ್ತಿದೆ. ಚುನಾವಣೆಗೆ ಹಣಬೇಕು. ಆದರೆ, ಅದೇ ಪ್ರಧಾನವಾಗಬಾರದು ಎಂದು ಹೇಳಿದರು‌.

ADVERTISEMENT

ಒಮ್ಮೆಯಾದರೂ ವಿಧಾನಸೌಧದ ಮೆಟ್ಟಿಲು ಹತ್ತಬೇಕು ಎಂದು ಎಷ್ಟೋ ಜನರು ಕನಸು‌ ಕಾಣುತ್ತಾರೆ. ಆದರೆ, ಕನಸುನನಸಾದಾಗ ಕಲಾಪಗಳಿಗೆ ಬರುವುದಿಲ್ಲ. ಇಂತಹ‌ ಮನೋಭಾವ ಹೋಗಬೇಕು. ಉತ್ತಮ ಸಂಸದೀಯ ಪಟುಗಳಾಗಬೇಕು ಎಂದರು

ಸಚಿವರಾದ ಜಮೀರ್ ಅಹಮದ್, ಎಚ್.ಕೆ.ಪಾಟೀಲ, ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಭಾಪತಿ ಬಸವರಾಜ ಹೊರಟ್ಟಿ ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.