ADVERTISEMENT

ಉಡುಪಿ: ಕಳೆಗಟ್ಟಿದ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2019, 6:33 IST
Last Updated 23 ಆಗಸ್ಟ್ 2019, 6:33 IST
   

ಉಡುಪಿ: ಕೃಷ್ಣನೂರು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಕಳೆಗಟ್ಟಿದೆ.

ಶುಕ್ರವಾರ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಮುದ್ದು ಕೃಷ್ಣ ವೇಷ ಸ್ಪರ್ಧೆ ನಡೆಯಿತು.

ಕೃಷ್ಣವೇಷಧಾರಿಗಳಾಗಿದ್ದ ಮಕ್ಕಳು ವೇದಿಕೆ ಮೇಲೆ ಹೆಜ್ಜೆ ಹಾಕುತ್ತ, ಬೆಣ್ಣೆ ಮೆಲ್ಲುತ್ತ ಕಣ್ಮನ ಸೆಳೆದರು.

ADVERTISEMENT

ಅಷ್ಟಮಿ ಹಿನ್ನೆಲೆಯಲ್ಲಿಕೃಷ್ಣ ಮಠದಲ್ಲಿ ಅದಮಾರು ಮಠದ ಕಿರಿಯ ಸ್ವಾಮೀಜಿ ಈಶಪ್ರಿಯ ತೀರ್ಥರು ಕೃಷ್ಣ ದೇವರಿಗೆ ಯಶೋಧೆ ಕೃಷ್ಣ ಅಲಂಕಾರ ಮಾಡಿದರು. ಲಕ್ಷ ತುಳಸಿ ಅರ್ಚನೆ ಮಾಡಿ ಪರ್ಯಾಯ ವಿದ್ಯಾಧೀಶತೀರ್ಥರು ಮಹಾಪೂಜೆ ನೆರವೇರಿಸಿದರು.

ಮಧ್ಯರಾತ್ರಿ ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಲಾಗುವುದು. ಶನಿವಾರ ವಿಟ್ಲಪಿಂಡಿ ಉತ್ಸವ ನಡೆಯಲಿದೆ.

ರಥಬೀದಿಯಲ್ಲಿ ಶ್ರೀಕೃಷ್ಣನ ಲೀಲೋತ್ಸವಗಳು ನಡೆಯಲಿವೆ. ಚಾತುರ್ಮಾಸ್ಯದ ಕಾರಣ ಕೃಷ್ಣನ ಉತ್ಸವ ಮೂರ್ತಿಯನ್ನು ಗರ್ಭಗುಡಿಯಿಂದ ಹೊರತರುವಂತಿಲ್ಲ. ಹಾಗಾಗಿ, ಕೃಷ್ಣನ ಮೃಣ್ಮಯ (ಮಣ್ಣಿನ) ಮೂರ್ತಿಯನ್ನು ಚಿನ್ನದ ರಥದಲ್ಲಿಟ್ಟು ಶನಿವಾರ ರಥಬೀದಿಯಲ್ಲಿ ಮೆರವಣಿಗೆ ನಡೆಸಲಾಗುವುದು.

ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಭಕ್ತರು ಕೃಷ್ಣನ ದರ್ಶನ ಪಡೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.