ಬೆಂಗಳೂರು:ನಮ್ಮ ಸರ್ಕಾರ ಮಾಡಿದ್ದ ಸಾಲ ಮನ್ನಾವನ್ನು ಬಿಜೆಪಿ ನಾಯಕರು ಲಾಲಿಪಾಪ್ ಎಂದು ಹೀಯಾಳಿಸಿದ್ದರು. ವರ್ಷಕ್ಕೆ ₹6000 ರೂಪಾಯಿ ಎಂದರೆ ದಿನಕ್ಕೆ ₹17 ಆರ್ಥಿಕ ನೆರವು ಅಷ್ಟೆ. ಇದು ಲಾಲಿಪಾಪ್ ಅಲ್ಲ, ರೈತರಿಗೆ ನೀಡಿದ ಚಾಕೊಲೇಟ್‌ಎಂದು ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಟೀಕಿಸಿದರು.
ಕೇಂದ್ರ ಸರ್ಕಾರ ಮಂಡಿಸಿರುವುದು ಬಜೆಟ್ ಅಲ್ಲ; ಚುನಾವಣಾ ಪ್ರಣಾಳಿಕೆ. ಬಜೆಟ್ ಪ್ರಸ್ತಾವಗಳನ್ನು ಅನುಷ್ಠಾನಕ್ಕೆ ತರಲು ತಮ್ಮ ಸರ್ಕಾರ ಇರುವುದಿಲ್ಲ ಎನ್ನುವುದು ಪ್ರಧಾನಿ ನರೇಂದ್ರಮೋದಿಯವರಿಗೂ ಗೊತ್ತಿದೆ.ಐದು ವರ್ಷಗಳ ಹಿಂದೆ ಬಿಜೆಪಿ ಪ್ರಕಟಿಸಿದ್ದ ಪ್ರಣಾಳಿಕೆಯ ಗತಿಯೇ ಈ ಬಜೆಟ್‌ಗೂ ಬರಲಿದೆ ಎಂದು ಕುಟುಕಿದರು.
ಇವನ್ನೂ ಓದಿ...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.