ADVERTISEMENT

ಪ್ಯಾಲೆಸ್ಟೀನಿಯನ್ನರ ನರಮೇಧ ನಿಲ್ಲಿಸಿ: ಇಸ್ರೇಲ್‌ಗೆ ಅಮ್ನೆಸ್ಟಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2024, 13:18 IST
Last Updated 5 ಡಿಸೆಂಬರ್ 2024, 13:18 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕೈರೊ: ಗಾಜಾ ಪಟ್ಟಿಯಲ್ಲಿ ತೀವ್ರವಾದ ದಾಳಿ ನಡೆಸುವ ಮೂಲಕ ಹಮಾಸ್‌ ಎದುರಿನ ಯುದ್ಧದಲ್ಲಿ ಇಸ್ರೇಲ್ ನರಮೇಧ ಮಾಡುತ್ತಿದೆ. ಪ್ಯಾಲೆಸ್ಟೇನಿಯನ್ನರನ್ನು ಬೇಕೆಂದೇ ನಾಶಗೊಳಿಸಲು ಪ್ರಮುಖ ಮೌಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದ್ದು, ಅಹಾರ ಹಾಗೂ ಔಷಧದಂತಹ ವಸ್ತುಗಳೂ ದೊರೆಯದಂತೆ ತಡೆಹಿಡಿಯುತ್ತಿದೆ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಆರೋಪಿಸಿದೆ.

2023ರ ಅಕ್ಟೋಬರ್ 7ರಂದು ಹಮಾಸ್‌ನಲ್ಲಿ ಇಸ್ರೇಲ್ ನಡೆಸಿದ ದಾಳಿಗೆ ಸಮರ್ಥನೆಯೇ ಇಲ್ಲ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಮಾನವ ಹಕ್ಕುಗಳ ಸಂಸ್ಥೆಯು ಗುರುವಾರ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದೆ. ನಾಗರಿಕರ ವಾಸಸ್ಥಳಗಳಲ್ಲಿ ಉಗ್ರರ ಹಾಜರಿ ಇರುವಂತೆ ಮಾಡುವುದಾಗಲೀ, ಆ ರೀತಿಯ ಯುದ್ಧಕ್ಕೆ ಇಂಬುಗೊಟ್ಟಿದ್ದಾಗಲೀ ಸರಿಯಲ್ಲ ಎಂದಿದೆ. ಇಸ್ರೇಲ್‌ ಮಾಡುತ್ತಿರುವ ನರಮೇಧಕ್ಕೆ ಅಮೆರಿಕ ಮತ್ತಿತರ ರಾಷ್ಟ್ರಗಳು ಬೆಂಬಲ ನೀಡುತ್ತಿರುವುದೂ ಸರಿಯಲ್ಲ ಎಂದಿರುವ ಸಂಸ್ಥೆ, ಅಂತಹ ದೇಶಗಳು ಶಸ್ತ್ರಾಸ್ತ್ರ ಪೂರೈಕೆ ನಿಲ್ಲಿಸಬೇಕು ಎಂದೂ ಆಗ್ರಹಿಸಿದೆ.

‘ನಮಗೆ ದೊರೆತಿರುವ ಮಾಹಿತಿಯ ಪ್ರಕಾರ ಇಸ್ರೇಲ್‌ ನಡೆಸಿರುವುದು ನರಮೇಧ. ಇದು ಅಂತರರಾಷ್ಟ್ರೀಯ ಸಮುದಾಯಕ್ಕೆ ಎಚ್ಚರಿಕೆಯ ಘಂಟೆಯಾಗಬೇಕು. ತಕ್ಷಣವೇ ಈ ಕೃತ್ಯಗಳನ್ನೆಲ್ಲ ನಿಲ್ಲಿಸಬೇಕು’ ಎಂದು ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ನ ಪ್ರಧಾನ ಕಾರ್ಯದರ್ಶಿ ಆಗ್ನಸ್ ಕಲಮಾರ್ಡ್ ಹೇಳಿಕೆಯ ಮೂಲಕ ಒತ್ತಾಯಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.