ಭೂಕಂಪ (ಸಾಂದರ್ಭಿಕ ಚಿತ್ರ)
– ಐಸ್ಟಾಕ್ ಚಿತ್ರ
ಬಾಂಗ್ಲಾದೇಶ ರಾಜಧಾನಿ ಢಾಕಾದ ಅಗ್ರಗಾಂವ್‌ನಲ್ಲಿ ಶುಕ್ರವಾರ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.4 ತೀವ್ರತೆ ದಾಖಲಾಗಿದೆ.
ಬಿಎಂಡಿ ಭೂಕಂಪನ ಕೇಂದ್ರದಿಂದ ನೈಋತ್ಯ ಭಾಗದಲ್ಲಿ ಭೂಕಂಪ ಉಂಟಾಗಿದೆ. ಕೋಲ್ಕತ್ತ ಸೇರಿ ಪಶ್ಚಿಮ ಬಂಗಾಳದ ಹಲವು ಭಾಗಗಳಲ್ಲಿಯೂ ಭೂಮಿ ಕಂಪಿಸಿದ ಅನುಭವ ಆಗಿದೆ.
ಭೂಮಿ ಕಂಪಿಸುತ್ತಲೇ ಮನೆಗಳಿಂದ ಜನರು ಹೊರಗೆ ಓಡಿ ಬಂದಿದ್ದಾರೆ. ಕಂಪನದಿಂದಾಗಿ ಮನೆಯೊಳಗಿನ ವಸ್ತುಗಳು ಬೀಳುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
‘ನಾವು ಸೋಫಾದಲ್ಲಿ ಕುಳಿತಿದ್ದಾಗ ಏಕಾಏಕಿ ಕಂಪನದ ಅನುಭವವಾಯಿತು. ನಾವು ಮನೆಯಿಂದ ಹೊರಗೆ ಓಡಿ ಬಂದೆವು. ಸೋಫಾ ಹಾಗೂ ಫ್ಯಾನ್ ಕಂಪಿಸುತ್ತಿತ್ತು. ಟೇಬಲ್ ಮೇಲೆ ಇಟ್ಟಿದ್ದ ಬಾಟಲಿ ಕೆಳಗೆ ಬಿತ್ತು. ನಾವು ನೆಲ ಮಹಡಿಗೆ ಧಾವಿಸಿದೆವು’ ಎಂದು ಕೋಲ್ಕತ್ತ ನಿವಾಸಿ ಸ್ವಾಗತ ಎಂಬವರು ಎಎನ್‌ಐಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.