ADVERTISEMENT

ಅಮೆರಿಕಕ್ಕೆ ಸಾಯ್ ಇಂಗ್ ವೆನ್ ಭೇಟಿ: ತೈವಾನ್ ಸುತ್ತ ಸಮರಾಭ್ಯಾಸ ಆರಂಭಿಸಿದ ಚೀನಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 8 ಏಪ್ರಿಲ್ 2023, 2:38 IST
Last Updated 8 ಏಪ್ರಿಲ್ 2023, 2:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೀಜಿಂಗ್‌: ದ್ವೀಪ ರಾಷ್ಟ್ರ ತೈವಾನ್‌ ಸುತ್ತಲೂ ಇಂದಿನಿಂದ ಮೂರು ದಿನಗಳವರೆಗೆ ಸೇನಾ ಕಾರ್ಯಾಚರಣೆಯನ್ನು ನಡೆಸುವುದಾಗಿ ಚೀನಾದ ಸೇನೆ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಹೇಳಿದೆ.

ತೈವಾನ್‌ ಅಧ್ಯಕ್ಷೆ ಸಾಯ್‌ ಇಂಗ್‌ ವೆನ್‌ ಅವರು ಅಮೆರಿಕಕ್ಕೆ ಭೇಟಿ ನೀಡಿರುವುದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ವೆನ್‌ ಅವರು ಅಮೆರಿಕ ಪ್ರವಾಸ ಮುಗಿಸಿ ತೈವಾನ್‌ಗೆ ಹಿಂದಿರುಗಿದ ಮರುದಿನವೇ ಸೇನಾ ಕಾರ್ಯಾಚರಣೆ ನಡೆಸುವುದಾಗಿ ಚೀನಾ ಘೋಷಿಸಿದೆ.

ADVERTISEMENT

ದ್ವೀಪ ರಾಷ್ಟ್ರದ ಸುತ್ತಲೂ ಚೀನಾದ 13 ವಿಮಾನಗಳು ಮತ್ತು ಮೂರು ಯುದ್ಧನೌಕೆಗಳನ್ನು ಪತ್ತೆ ಮಾಡಲಾಗಿದೆ ಎಂದು ತೈವಾನ್‌ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.