ಬೀಜಿಂಗ್: ಕಳೆದ ವಾರ ಸಂಭವಿಸಿದ ಭೂಕಂಪನದ ಪರಿಣಾಮ, ಟಿಬೆಟ್‌ನಲ್ಲಿನ ಐದು ಜಲಾಶಯಗಳಲ್ಲಿ ತೊಂದರೆಗಳಿರುವುದನ್ನು ಪತ್ತೆ ಮಾಡಲಾಗಿದೆ ಎಂದು ಚೀನಾ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ದೇಶದ ನೈರುತ್ಯ ಭಾಗದಲ್ಲಿ ಕಳೆದ ವಾರ 6.8 ತೀವ್ರತೆಯ ಭೂಕಂಪನವಾಗಿತ್ತು. ಹೀಗಾಗಿ, ಈ ಭಾಗದಲ್ಲಿರುವ 14 ಜಲವಿದ್ಯುತ್ ಯೋಜನೆಗೆ ಸಂಬಂಧಿಸಿದ ಅಣೆಕಟ್ಟುಗಳ ಪರಿಶೀಲನೆ ನಡೆಸಲಾಗಿತ್ತು. ಈ ಪೈಕಿ 5 ಜಲಾಶಯಗಳಲ್ಲಿ ತೊಂದರೆಗಳು ಕಾಣಿಸಿಕೊಂಡಿರುವುದು ಪತ್ತೆಯಾಗಿದೆ ಎಂದು ಟಿಬೆಟ್‌ನ ತುರ್ತು ನಿರ್ವಹಣೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಐದು ಜಲಾಶಯಗಳ ಪೈಕಿ, ಮೂರು ಜಲಾಶಯಗಳನ್ನು ಖಾಲಿ ಮಾಡಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಭೂಕಂಪನ ಕೇಂದ್ರ ದಾಖಲಾಗಿದ್ದ ಟಿಂಗ್ರಿ ಕೌಂಟಿಯಲ್ಲಿರುವ ಜಲಾಶಯವೊಂದರ ಗೋಡೆ ವಾಲಿರುವುದರಿಂದ, ತಗ್ಗು ಪ್ರದೇಶಗಳಲ್ಲಿರುವ ಆರು ಗ್ರಾಮಗಳ ಅಂದಾಜು 1,500 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.