ವೆಲ್ಲಿಂಗ್ಟನ್: ನ್ಯೂಜಿಲೆಂಡ್‌ನ ನೂತನ ಪ್ರಧಾನ ಮಂತ್ರಿಯಾಗಿ ಕ್ರಿಸ್ ಹಿಪ್ಕಿನ್ಸ್ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.
ಇದೇ ವೇಳೆ ಉಪ ಪ್ರಧಾನಿಯಾಗಿ ಕಾರ್ಮೆಲ್ ಸೆಪಿಲೋನೈ ಸಹ ಪ್ರಮಾಣ ವಚನ ಸ್ವೀಕರಿಸಿದರು.
ಜನವರಿ 19ರಂದು ಜಸಿಂಡ ಅರ್ಡರ್ನ್, ಪ್ರಧಾನಿ ಹುದ್ದೆಗೆ ದಿಢೀರ್ ರಾಜೀನಾಮೆ ನೀಡಿದ್ದರು. ಬಳಿಕ ನ್ಯೂಜಿಲೆಂಡ್‌ನ 41ನೇ ಪ್ರಧಾನಿಯಾಗಿ ಕ್ರಿಸ್ ಹಿಪ್ಕಿನ್ಸ್ ಆಯ್ಕೆಯಾದರು.
ಇದನ್ನೂ ಓದಿ: ಪ್ರಧಾನಿಯಾಗಿ ಕೊನೆಯ ಭಾಷಣ ಮಾಡಿದ ಜಸಿಂಡ ಆರ್ಡರ್ನ್
44 ವರ್ಷದ ಹಿಪ್ಕಿನ್ಸ್ ಅವರಿಗೆ ನ್ಯೂಜಿಲೆಂಡ್‌ನ ಗವರ್ನರ್-ಜನರಲ್ ಸಿಂಡಿ ಕಿರೊ, ಪ್ರಮಾಣ ವಚನ ಬೋಧಿಸಿದರು.
ನನಗೆ ದೊರಕಿರುವ ಅತಿ ದೊಡ್ಡ ಗೌರವ ಇದಾಗಿದ್ದು, ನನ್ನ ಜೀವನದ ಅತಿ ದೊಡ್ಡ ಜವಾವ್ದಾರಿಯಾಗಿದೆ ಎಂದು ಹಿಪ್ಕಿನ್ಸ್ ಪ್ರತಿಕ್ರಿಯಿಸಿದರು.
ಜಸಿಂಡ ಅರ್ಡರ್ನ್ ಸರ್ಕಾರದಲ್ಲಿ ಹಿಪ್ಕಿನ್ಸ್, ಶಿಕ್ಷಣ ಮತ್ತು ಪೊಲೀಸ್ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕೋವಿಡ್ ಸಾಂಕ್ರಾಮಿಕ ಕಾಲಘಟ್ಟದಲ್ಲಿ ಬಿಕ್ಕಟ್ಟು ನಿರ್ವಹಣೆಯ ಹೊಣೆ ವಹಿಸಿದ್ದರಲ್ಲದೆ ಹೆಚ್ಚಿನ ಜನಮನ್ನಣೆಗೆ ಪಾತ್ರರಾಗಿದ್ದರು.
ನ್ಯೂಜಿಲೆಂಡ್‌ನಲ್ಲಿ ಸಾರ್ವತ್ರಿಕ ಚುನಾವಣೆಗೆ ಇನ್ನೂ ಒಂಬತ್ತು ತಿಂಗಳು ಮಾತ್ರ ಬಾಕಿಯಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.