ADVERTISEMENT

ಯುಎಸ್‌ ಕ್ಯಾಪಿಟಲ್ ತಲುಪಿದ ಜೋ ಬೈಡನ್, ಕಮಲಾ ಹ್ಯಾರಿಸ್: ಪದಗ್ರಹಣಕ್ಕೆ ಕ್ಷಣಗಣನೆ

ಶ್ವೇತಭವನ ತೊರೆದ ಟ್ರಂಪ್

ಏಜೆನ್ಸೀಸ್
Published 20 ಜನವರಿ 2021, 16:24 IST
Last Updated 20 ಜನವರಿ 2021, 16:24 IST
ಯುಎಸ್‌ ಕ್ಯಾಪಿಟಲ್‌ನಲ್ಲಿ ಪದಗ್ರಹಣ ಸಮಾರಂಭಕ್ಕೂ ಮುನ್ನ ಗಣ್ಯರು
ಯುಎಸ್‌ ಕ್ಯಾಪಿಟಲ್‌ನಲ್ಲಿ ಪದಗ್ರಹಣ ಸಮಾರಂಭಕ್ಕೂ ಮುನ್ನ ಗಣ್ಯರು   

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಹುದ್ದೆಯಿಂದ ನಿರ್ಗಮಿಸುತ್ತಿರುವ ಡೊನಾಲ್ಡ್ ಟ್ರಂಪ್ ಅವರು ಬುಧವಾರ ಶ್ವೇತಭವನ ತೊರೆದು ಫ್ಲೋರಿಡಾಗೆ ತೆರಳಿದ್ದಾರೆ. ನೂತನ ಅಧ್ಯಕ್ಷರಾಗಿ ಜೋ ಬೈಡನ್ ಮತ್ತು ಉಪಾಧ್ಯಕ್ಷೆಯಾಗಿ ಕಮಲಾ ಹ್ಯಾರಿಸ್ ಪದಗ್ರಹಣಕ್ಕೆ ಕ್ಷಣಗಣನೆ ಆರಂಭವಾಗಿದೆ.

ಬೈಡನ್ ಹಾಗೂ ಕಮಲಾ ಈಗಾಗಲೇ ‘ಯುಎಸ್‌ ಕ್ಯಾಪಿಟಲ್’ ತಲುಪಿದ್ದಾರೆ. ಬರಾಕ್‌ ಒಬಾಮಾ ಆಡಳಿತಾವಧಿಯಲ್ಲಿ ಉಪಾಧ್ಯಕ್ಷರಾಗಿದ್ದ ಜೋ ಬೈಡನ್‌ ಇನ್ನು ಕೆಲವೇ ಕ್ಷಣಗಳಲ್ಲಿ ಅಮೆರಿಕದ 46ನೇ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

‘ಅಮೆರಿಕಕ್ಕೆ ಹೊಸ ದಿನ’: ‘ಇದು ಅಮೆರಿಕದ ಪಾಲಿಗೆ ಹೊಸ ಆರಂಭ. ಪದಗ್ರಹಣ ಸಮಾರಂಭದ ನೇರ ಪ್ರಸಾರ ವೀಕ್ಷಿಸಿ’ ಎಂದು ಜೋ ಬೈಡನ್ ಟ್ವೀಟ್ ಮಾಡಿದ್ದಾರೆ. ಗಣ್ಯರು ಈಗಾಗಲೇ ‘ಯುಎಸ್ ಕ್ಯಾಪಿಟಲ್’ ತಲುಪಿದ್ದು ಪದಗ್ರಹಣ ಸಮಾರಂಭದ ಪೂರ್ವಭಾವಿ ಕಾರ್ಯಕ್ರಮಗಳು ಆರಂಭವಾಗಿವೆ.

ADVERTISEMENT

ಬೈಡನ್‌ ಮತ್ತು ಹ್ಯಾರಿಸ್‌ ಭಾರತೀಯ ಕಾಲಮಾನ ರಾತ್ರಿ 10:30ಕ್ಕೆ (ಅಮೆರಿಕದಲ್ಲಿ ಮಧ್ಯಾಹ್ನ 12ರ ನಂತರ) ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಬೈಡನ್‌ ಅವರಿಗೆ ಅಮೆರಿಕದ ಮುಖ್ಯ ನ್ಯಾಯಮೂರ್ತಿ ಜಾನ್‌ ರಾಬರ್ಟ್ಸ್ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ. ಕಮಲಾ ಅವರಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಸೋನಿಯಾ ಸೋಟೊಮೇಯರ್‌ ಪ್ರತಿಜ್ಞಾ ವಿಧಿ ಬೋಧಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.