ADVERTISEMENT

ಲಾಸ್‌ಏಂಜಲೀಸ್‌: ಪರ್ವತ, ಮರುಭೂಮಿಯತ್ತ ಕಾಳ್ಗಿಚ್ಚು

ವಸತಿ ಪ್ರದೇಶಗಳಲ್ಲಿ ಆತಂಕ

ಏಜೆನ್ಸೀಸ್
Published 22 ಸೆಪ್ಟೆಂಬರ್ 2020, 5:57 IST
Last Updated 22 ಸೆಪ್ಟೆಂಬರ್ 2020, 5:57 IST
ಕ್ಯಾಲಿಫೊರ್ನಿಯಾದಲ್ಲಿ ಭಾನುವಾರ ಸಂಭವಿಸಿದ ಕಾಳ್ಗಿಚ್ಚು ನಂದಿಸುವಲ್ಲಿ ನಿರತರಾಗಿರುವ ಅಗ್ನಿಶಾಮಕ ಸಿಬ್ಬಂದಿ
ಕ್ಯಾಲಿಫೊರ್ನಿಯಾದಲ್ಲಿ ಭಾನುವಾರ ಸಂಭವಿಸಿದ ಕಾಳ್ಗಿಚ್ಚು ನಂದಿಸುವಲ್ಲಿ ನಿರತರಾಗಿರುವ ಅಗ್ನಿಶಾಮಕ ಸಿಬ್ಬಂದಿ   

ಲಾಸ್‌ಏಂಜಲೀಸ್‌ ‌: ಕ್ಯಾಲಿಫೊರ್ನಿಯಾದಲ್ಲಿ ಉಂಟಾಗಿರುವ ಅಗಾಧ ಕಾಳ್ಗಿಚ್ಚು ಸೋಮವಾರ ಲಾಸ್‌ಏಂಜಲೀಸ್‌ನ ಈಶಾನ್ಯ ಪರ್ವತಗಳು ಮತ್ತು ಮೊಜಾವೆ ಮರುಭೂಮಿಗೂ ವಿಸ್ತರಿಸಿಕೊಂಡು, ವಸತಿ ಪ್ರದೇಶಗಳ ನಿವಾಸಿಗಳಲ್ಲಿ ಆತಂಕ ಉಂಟುಮಾಡಿದೆ.

’ಕ್ಯಾಲಿಪೊರ್ನಿಯಾದಲ್ಲಿ ಸಂಭವಿಸಿರುವ ಐದು ಕಾಳ್ಗಿಚ್ಚು ಪ್ರಕರಣಗಳಿಂದಾಗಿ 14,500 ಚದುರ ಕಿಲೋಮೀಟರ್ ವ್ಯಾಪ್ತಿ ಪ್ರದೇಶ ನಾಶವಾಗಿದೆ. ಇದು ಕನೆಕ್ಟಿಕಟ್ ರಾಜ್ಯಕ್ಕಿಂತ ಬಹುದೊಡ್ಡ ಪ್ರದೇಶವಾಗಿದೆ’ ಗೌವ್‌ಗವಿನ್‌ ನ್ಯೂಸಮ್‌ ವರದಿ ಮಾಡಿದೆ.

ಕಾಳ್ಗಿಚ್ಚು ಹಬ್ಬುತ್ತಿರುವ ಈಶಾನ್ಯ ಪರ್ವತಗಳ ತಪ್ಪಲು ಮತ್ತು ಮರುಭೂಮಿಯ ಆಸುಪಾಸಿನಲ್ಲಿರುವ ನಿವಾಸಿಗಳಿಗೆ ’ಎಚ್ಚರಿಕೆಯ ಆದೇಶ’ ನೀಡಲಾಗಿದೆ. ರಾಜ್ಯದಾದ್ಯಂತ ಕನಿಷ್ಠ 23,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ನ್ಯೂಸಮ್ ವರದಿಯಲ್ಲಿ ಉಲ್ಲೇಖಿಸಿದೆ.

ADVERTISEMENT

ಲಾಸ್‌ಏಂಜಲೀಸ್‌ನಲ್ಲಿ ಸಂಭವಿಸಿದ ಕಾಳ್ಗಿಚ್ಚು ಸುಮಾರು ಎರಡು ವಾರಗಳ ಕಾಲ, 427 ಚ. ಕಿ.ಮೀ ಪ್ರದೇಶವನ್ನು ನಾಶಪಡಿಸಿತ್ತು. ಕಾಳ್ಗಿಚ್ಚಿನಿಂದ ಯಾವುದೇ ಸಾವುನೋವಿನ ಪ್ರಕರಣಗಳು ವರದಿಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.