ADVERTISEMENT

ಇಥಿಯೋಪಿಯಾದಲ್ಲಿ ಮೊಳಗಿದ ‘ವಂದೇ ಮಾತರಂ’: ಚಪ್ಪಾಳೆ ತಟ್ಟಿ ಸಂಭ್ರಮಿಸಿದ PM ಮೋದಿ

ಪಿಟಿಐ
Published 17 ಡಿಸೆಂಬರ್ 2025, 15:39 IST
Last Updated 17 ಡಿಸೆಂಬರ್ 2025, 15:39 IST
   

ಅಡಿಸ್‌ ಅಬಾಬಾ: ಪ್ರಧಾನಿ ಮೋದಿ ಅವರಿಗಾಗಿ ಇಥಿಯೋಪಿಯಾದ ಪ್ರಧಾನಿ ಅಬಿ ಅಹ್ಮದ್ ಅಲಿ ಅವರು ಆಯೋಜಿಸಿದ್ದ ಔತಣಕೂಟದಲ್ಲಿ ಮೂವರು ಗಾಯಕರು ವಂದೇ ಮಾತರಂ ಗೀತೆ ಗಾಯನ ಪ್ರಸ್ತುತಪಡಿಸಿದರು.

ಗಾಯಕರ ತಂಡ ವಂದೇ ಮಾತರಂ ಗೀತೆ ಹಾಡುತ್ತಿದ್ದಂತೆ ಪ್ರಧಾನಿ ಮೋದಿ ಕೈ ಎತ್ತಿ ಚಪ್ಪಾಳೆ ತಟ್ಟಿದ್ದಾರೆ. ತಕ್ಷಣ ಅಲ್ಲಿದ್ದ ಇತರರೂ ಚಪ್ಪಾಳೆ ತಟ್ಟಿದ್ದಾರೆ.

ಇದರ ವಿಡಿಯೊವನ್ನು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಮೋದಿ, ‘ಇಥಿಯೋಪಿಯಾದ ಮೂವರು ಗಾಯಕರು ಭಾರತದ ರಾಷ್ಟ್ರೀಯ ಗೀತೆಯನ್ನು ಹೃದಯ ತುಂಬಿ ಹಾಡಿದ್ದಾರೆ. ಗೀತೆಗೆ 150 ವರ್ಷ ತುಂಬಿದ ಈ ಸಂದರ್ಭದಲ್ಲಿ ಇದು ತುಂಬಾ ಹೃದಯಸ್ಪರ್ಶಿ ಕ್ಷಣವಾಗಿತ್ತು’ ಎಂದು ಬಣ್ಣಿಸಿದ್ದಾರೆ.’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಪ್ರಧಾನಿ ಮೋದಿಯವರು ನಾಲ್ಕು ದಿನಗಳ ಮೂರು ದೇಶಗಳ ಭೇಟಿ ಕೈಗೊಂಡಿದ್ದಾರೆ.

ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ಅವರು ರಚಿಸಿರುವ ‘ವಂದೇ ಮಾತರಂ‘ ಗೀತೆಗೆ 150 ವರ್ಷ ತುಂಬಿದ ಕಾರಣ ಲೋಕಸಭೆಯಲ್ಲಿ ನಡೆದ ಚರ್ಚೆಯ ವೇಳೆ ಪ್ರಧಾನಿ ನರೇಂದ್ರ ಮೋದಿಯವರು, 'ವಂದೇ ಮಾತರಂಗೆ ನೂರು ವರ್ಷವಾದಾಗ, ಸಂವಿಧಾನವನ್ನು ಉಸಿರುಗಟ್ಟಿಸಲಾಗಿತ್ತು. ದೇಶವನ್ನು ತುರ್ತು ಪರಿಸ್ಥಿತಿಯಲ್ಲಿ ಬಂಧಿಸಲಾಗಿತ್ತು ತುಷ್ಟೀಕರಣ ರಾಜಕಾರಣಕ್ಕಾಗಿ ಕಾಂಗ್ರೆಸ್‌ ಪಕ್ಷವು ಗೀತೆಯನ್ನು ಕೇವಲ ಎರಡು ಚರಣಗಳಿಗೆ ಇಳಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದರು. ಜತೆಗೆ ಈಗ ಗೀತೆಗೆ 150 ವರ್ಷ ತುಂಬಿದ ಸಂದರ್ಭಕ್ಕೆ ಸಾಕ್ಷಿಯಾಗುತ್ತಿರುವುದು ನಮ್ಮ ಹೆಮ್ಮೆ ಎಂದಿದ್ದರು. 

ಈ ಗೀತೆ ಈಗಲೂ ರಾಜಕಾರಣದ ಹುದಲಿನಲ್ಲಿ ಸಿಲುಕಿ ವಿವಾದವನ್ನು ಸೃಷ್ಟಿಸುತ್ತಲೇ ಇದೆ. ಇದರ ನಡುವೆ ಇಥಿಯೋಪಿಯಾದಲ್ಲಿ ಅಲ್ಲಿಯ ಗಾಯಕರು ವಂದೇ ಮಾತರಂ ಗೀತೆ ಹಾಡಿರುವುದು ವಿಶೇಷ ಎನಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.