ADVERTISEMENT

UN ಭದ್ರತಾ ಮಂಡಳಿಯಲ್ಲಿ ಭಾರತ, ಉಕ್ರೇನ್‌ಗೆ ಕಾಯಂ ಸ್ಥಾನ ಏಕಿಲ್ಲ: ಝೆಲೆನ್‌ಸ್ಕಿ

ಪಿಟಿಐ
Published 22 ಸೆಪ್ಟೆಂಬರ್ 2022, 14:18 IST
Last Updated 22 ಸೆಪ್ಟೆಂಬರ್ 2022, 14:18 IST
ವೊಲೊಡಿಮಿರ್‌ ಝೆಲೆನ್‌ಸ್ಕಿ
ವೊಲೊಡಿಮಿರ್‌ ಝೆಲೆನ್‌ಸ್ಕಿ   

ವಿಶ್ವಸಂಸ್ಥೆ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಜಪಾನ್, ಬ್ರೆಜಿಲ್ ಮತ್ತು ಉಕ್ರೇನ್‌ನಂತಹ ರಾಷ್ಟ್ರಗಳಿಗೆ ಕಾಯಂ ಸ್ಥಾನ ಏಕಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಪ್ರಶ್ನಿಸಿದ್ದಾರೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮೊದಲೇ ರೆಕಾರ್ಡ್ ಮಾಡಿದ ಝೆಲೆನ್‌ಸ್ಕಿ ಸಂದೇಶದಲ್ಲಿ ಈ ರೀತಿಯಾಗಿ ಹೇಳಿದ್ದಾರೆ. ಅಲ್ಲದೆ ಖಂಡಿತವಾಗಿಯೂ ಇದನ್ನು ಬಗೆಹರಿಸುವ ದಿನ ಬರುತ್ತದೆ ಎಂದು ಹೇಳಿದ್ದಾರೆ.

ವಿಶ್ವಸಂಸ್ಥೆಯಲ್ಲಿ ಸುಧಾರಣೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಇವೆಲ್ಲವೂ ಹೇಗೆ ಅಂತ್ಯಗೊಂಡಿತು? ಯಾವುದೇ ಪರಿಹಾರವಾಗಿಲ್ಲ ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.

ADVERTISEMENT

ನೀವು ಶಾಂತಿಯ ಸೂತ್ರವನ್ನು ಎಚ್ಚರಿಕೆಯಿಂದ ಗಮನ ಹಾಯಿಸಿದರೆ ಇದರ ಅನುಷ್ಠಾನವೇ ನೈಜ ಸುಧಾರಣೆಯಾಗಿ ಕಾಣಿಸುತ್ತದೆ. ನಮ್ಮ ಸೂತ್ರವು ಸಾರ್ವತ್ರಿಕವಾಗಿದ್ದು, ಜಗತ್ತಿನ ಉತ್ತರ ಹಾಗೂ ದಕ್ಷಿಣವನ್ನು ಒಗ್ಗೂಡಿಸುತ್ತದೆ ಎಂದು ಹೇಳಿದ್ದಾರೆ.

ಈ ಬಗ್ಗೆ ಉಕ್ರೇನ್ ಧ್ವನಿ ಎತ್ತುತ್ತದೆ. ರಷ್ಯಾದಿಂದ ಎಂದಾದರೂ ಅಂತಹ ಬೇಡಿಕೆ ಕೇಳಿದ್ದೀರಾ? ಯಾವುದೋ ಕಾರಣದಿಂದಾಗಿ ಭದ್ರತಾ ಮಂಡಳಿಯ ಕಾಯಂ ಸ್ಥಾನ ಹೊಂದಿದೆ. ಆದರೆ ಯಾವ ಕಾರಣಕ್ಕಾಗಿ ಭಾರತ, ಜಪಾನ್, ಬ್ರೆಜಿಲ್, ಟರ್ಕಿ, ಜರ್ಮನಿ ಮತ್ತು ನಮ್ಮ ಉಕ್ರೇನ್‌ಗೆ ಕಾಯಂ ಸ್ಥಾನವಿಲ್ಲ. ಈ ಸಮಸ್ಯೆ ಬಗೆಹರಿಸುವ ದಿನ ಬರಲಿದೆ ಎಂದು ಹೇಳಿದರು.

ಇದನ್ನೂ ಓದಿ:

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಐದು ಖಾಯಂ ಮತ್ತು 10 ಖಾಯಂ ಅಲ್ಲದ ಸದಸ್ಯ ರಾಷ್ಟ್ರಗಳನ್ನು ಹೊಂದಿದೆ. ಭಾರತಕ್ಕೆ ಖಾಯಂ ಸ್ಥಾನ ನೀಡಲು ಬೇಡಕೆ ನಿರಂತರವಾಗಿ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.