ADVERTISEMENT

ಅಂಟೋನಿಯೊ ಗುಟೆರಸ್‌ ಭೇಟಿ ವೇಳೆ ದಾಳಿ: ರಷ್ಯಾ ವಿರುದ್ಧ ಜರ್ಮನಿ ಕಿಡಿ

ಏಜೆನ್ಸೀಸ್
Published 29 ಏಪ್ರಿಲ್ 2022, 11:46 IST
Last Updated 29 ಏಪ್ರಿಲ್ 2022, 11:46 IST
ಉಕ್ರೇನಿನ ಕೀವ್‌ ನಗರದ ವಾಯವ್ಯದ ಮೊಶ್ಚುನ್ ಗ್ರಾಮದಲ್ಲಿ ರಷ್ಯಾ ಬಾಂಬ್‌ ದಾಳಿಗೆ ನಾಶವಾದ ವಸತಿ ಪ್ರದೇಶದ ವೈಮಾನಿಕ ನೋಟ – ಎಎಫ್‌ಪಿ ಚಿತ್ರ
ಉಕ್ರೇನಿನ ಕೀವ್‌ ನಗರದ ವಾಯವ್ಯದ ಮೊಶ್ಚುನ್ ಗ್ರಾಮದಲ್ಲಿ ರಷ್ಯಾ ಬಾಂಬ್‌ ದಾಳಿಗೆ ನಾಶವಾದ ವಸತಿ ಪ್ರದೇಶದ ವೈಮಾನಿಕ ನೋಟ – ಎಎಫ್‌ಪಿ ಚಿತ್ರ   

ಬರ್ಲಿನ್: ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್‌ ಅವರು ಉಕ್ರೇನ್‌ ರಾಜಧಾನಿ ಕೀವ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲೇ ರಷ್ಯಾ ವೈಮಾನಿಕ ದಾಳಿ ನಡೆಸಿರುವುದು 'ಅಮಾನವೀಯ' ಎಂದು ಜರ್ಮನಿ ಕಿಡಿಕಾರಿದೆ.

'ಗುಟೆರಸ್‌ ಅವರು ಕೀವ್‌ನಲ್ಲಿ ಮಾತುಕತೆ ನಡೆಸುತ್ತಿದ್ದ ಸಂದರ್ಭದಲ್ಲಿ ರಷ್ಯಾ ಕ್ಷಿಪಣಿ ದಾಳಿ ನಡೆಸಿರುವುದನ್ನು ನಾವು ಬಲವಾಗಿ ಖಂಡಿಸುತ್ತೇವೆ' ಎಂದು ಸರ್ಕಾರದ ವಕ್ತಾರ ವೊಲ್ಫ್‌ಗ್ಯಾಂಗ್‌ ಬುಯೆಚ್ನೆರ್‌ ಹೇಳಿದ್ದಾರೆ. ಹಾಗೆಯೇ, 'ಅಂತರರಾಷ್ಟ್ರೀಯ ಕಾನೂನಿನ ಮೇಲೆ ರಷ್ಯಾ ಯಾವುದೇ ಗೌರವ ಹೊಂದಿಲ್ಲ' ಎಂದೂ ಆರೋಪಿಸಿದ್ದಾರೆ.

ಗುಟೆರಸ್ ಅವರು ಬುಕಾ ಹಾಗೂ ಕೀವ್‌ನ ಕೆಲವು ಉಪನಗರಗಳಿಗೆ ಗುರುವಾರ ಭೇಟಿ ನೀಡಿದ್ದರು. ಈ ವೇಳೆ ರಷ್ಯಾ ದಾಳಿ ನಡೆಸಿದ್ದು, ವಿಶ್ವಸಂಸ್ಥೆಯ ತಂಡವನ್ನು ಆಘಾತಕ್ಕೀಡು ಮಾಡಿದೆ. ದಾಳಿಯಿಂದಾಗಿ ಯುಎಸ್‌ ಸ್ಥಾಪಿತ ಸುದ್ದಿ ಸಂಸ್ಥೆ 'ರೇಡಿಯೊ ಲಿಬರ್ಟಿ' ಪತ್ರಕರ್ತೆ ವೆರ ಗಿರಿಚ್‌ ಮೃತಪಟ್ಟಿದ್ದಾರೆ.10ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.