ಹಾಂಗ್ ಕಾಂಗ್: ಸಾಮಾನ್ಯ ಶೌಚಾಲಯವನ್ನು ಲಿಂಗತ್ವ ಅಲ್ಪಸಂಖ್ಯಾತರು ಬಳಸುವುದು ಅಪರಾಧ ಎಂಬ ಕಾನೂನನ್ನು ಹಾಂಗ್‌ಕಾಂಗ್‌ನ ನ್ಯಾಯಾಧೀಶರೊಬ್ಬರು ಬುಧವಾರ ರದ್ದು ಮಾಡಿದ್ದು, ತಮ್ಮ ಗುರುತಿಗೆ ತಕ್ಕಂತೆ ಅವರು ಸಾರ್ವಜನಿಕ ಶೌಚಾಲಯ ಬಳಸಬಹುದು ಎಂದು ಆದೇಶಿಸಿದ್ದಾರೆ.
ಮಹಿಳೆಯಾಗಿ ಹುಟ್ಟಿ, ಪುರುಷನಾಗಿ ಗುರುತಿಸಿಕೊಳ್ಳುವ ‘ಕೆ’ ಎಂಬುವವರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶ ರಸೆಲ್ ಕೋಲ್ಮನ್ ಅವರು, ‘ಕಾನೂನಿಯ ಮುಂದೆ ಎಲ್ಲ ನಿವಾಸಿಗಳೂ ಸಮಾನರು ಎಂದು ನಗರದ ಸಂವಿಧಾನ ಹೇಳುತ್ತದೆ. ಹೀಗಾಗಿ ಈ ನಿಯಮ ಆ ತತ್ವವನ್ನು ಉಲ್ಲಂಘಿಸುತ್ತದೆ’ ಎಂದು ಹೇಳಿದ್ದಾರೆ.
ಈ ಕಾನೂನನ್ನು ರದ್ದು ಮಾಡುವ ಆದೇಶವನ್ನು ಅವರು ಒಂದು ವರ್ಷದವರೆಗೆ ತಡೆಹಿಡಿದಿದ್ದು, ಸಂವಿಧಾನ ಉಲ್ಲಂಘಿಸುವಂತಹ ಈ ಕಾನೂನಿಗೆ ಪರ್ಯಾಯವಾದುದನ್ನು ಕಂಡುಕೊಳ್ಳಲು ಕಾಲಾವಕಾಶ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.