ADVERTISEMENT

ಸುನಕ್‌ಗೆ ಬ್ರಿಟನ್‌ ರಾಜ್ಯಭಾರ: ಭಾರತ–ಪಾಕ್‌ಗೆ ಚಾರಿತ್ರಿಕ ಹೆಮ್ಮೆ

ಪಿಟಿಐ
Published 24 ಅಕ್ಟೋಬರ್ 2022, 21:15 IST
Last Updated 24 ಅಕ್ಟೋಬರ್ 2022, 21:15 IST
   

ಇಸ್ಲಾಮಾಬಾದ್‌: ಬ್ರಿಟನ್‌ನ ಮೊದಲ ಬಿಳಿಯೇತರ ಪ್ರಧಾನಿಯಾಗಿ ರಿಷಿ ಸುನಕ್‌ ಅಧಿಕಾರ ಸ್ವೀಕರಿಸಲು ಸಜ್ಜಾಗಿರುವುದರಲ್ಲಿ ಬದ್ಧ ವೈರಿಗಳಾದ ಭಾರತ ಮತ್ತು ಪಾಕಿಸ್ತಾನದ ಪಾತ್ರವಿಲ್ಲದಿದ್ದರೂ ಇದು ಉಭಯ ರಾಷ್ಟ್ರಗಳಿಗೆ ಚಾರಿತ್ರಿಕ ಹೆಮ್ಮೆಯ ಸಂದರ್ಭವೆನಿಸಿದೆ.

ದೀಪಾವಳಿಯ ದಿನವೇ, ಹಿಂದೂ ಆರಾಧಕ 42ರ ಹರೆಯದ, ಮಾಜಿ ಚಾನ್ಸಲರ್‌ ರಿಷಿ ಸುನಕ್‌ ಆಡಳಿತರೂಢ ಕನ್ಸರ್ವೇಟಿವ್‌ ಪಕ್ಷದ (ಟೋರಿ) ಹೊಸ ನಾಯಕನಾಗಿ ಅವಿರೋಧವಾಗಿ ಆಯ್ಕೆಯಾಗುವ ಜತೆಗೆ ಬ್ರಿಟನ್‌ ಸಾಮ್ರಾಜ್ಯದ ರಾಜ್ಯಭಾರವನ್ನು ವಹಿಸಿಕೊಳ್ಳಲಿದ್ದಾರೆ.

ಪಾಕ್‌ ಮತ್ತು ಭಾರತ ಈ ಚಾರಿತ್ರಿಕ ಸಂದರ್ಭಕ್ಕೆ ಖುಷಿಪಡಲು ಕಾರಣವೂ ಇದೆ. ಸುನಕ್‌ ಅವರ ಅಜ್ಜ–ಅಜ್ಜಿ ಮೂಲತಃ ಬ್ರಿಟಿಷ್‌ ಭಾರತದವರು. ಸುನಕ್‌ ಪೂರ್ವಿಕರ ಹುಟ್ಟೂರು ಗುಜರನ್‌ವಾಲ ಈಗಿನ ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿದೆ. ಹಾಗಾಗಿ ಬ್ರಿಟನ್‌ನ ನೂತನ ಪ್ರಧಾನಿ ಸುನಕ್‌ ಭಾರತೀಯ ಮತ್ತು ಪಾಕಿಸ್ತಾನಿ ಮೂಲದವರು ಎನಿಸಿಕೊಳ್ಳುತ್ತಾರೆ. ಎರಡೂ ದೇಶಗಳು ಈ ವಿಷಯದಲ್ಲಿ ಸಂಭ್ರಮಿಸಬೇಕೆಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಅಭಿಪ್ರಾಯ ಹಂಚಿಕೊಂಡಿದ್ದಾರೆ.

ADVERTISEMENT

‘ಲಾಹೋರ್‌ನಿಂದ ಕದ್ದುಕೊಂಡು ಹೋಗಿರುವ ಕೊಹಿನೂರ್‌ ವಜ್ರವನ್ನು ಮರಳಿಸುವಂತೆ ಸುನಕ್‌ ಅವರನ್ನು ಪಾಕಿಸ್ತಾನ ಕೇಳಬೇಕು’ ಎಂದು ಸಲೀಂ ಎನ್ನುವವರು ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.