ADVERTISEMENT

ಮುಂದಿನ AI ಆ್ಯಕ್ಷನ್‌ ಶೃಂಗಕ್ಕೆ ಭಾರತ ಆತಿಥ್ಯ

ಪಿಟಿಐ
Published 11 ಫೆಬ್ರುವರಿ 2025, 15:31 IST
Last Updated 11 ಫೆಬ್ರುವರಿ 2025, 15:31 IST
<div class="paragraphs"><p>AI ಆ್ಯಕ್ಷನ್‌ ಶೃಂಗದಲ್ಲಿ ಭಾಗಿಯಾದ ನಾಯಕರು</p></div>

AI ಆ್ಯಕ್ಷನ್‌ ಶೃಂಗದಲ್ಲಿ ಭಾಗಿಯಾದ ನಾಯಕರು

   

ರಾಯಿಟರ್ಸ್‌ ಚಿತ್ರ

ಪ್ಯಾರಿಸ್: ಮುಂದಿನ ಕೃತಕ ಬುದ್ಧಿಮತ್ತೆ (ಎಐ) ಬಗೆಗಿನ ಶೃಂಗ ಭಾರತದಲ್ಲಿ ನಡೆಯಲಿದೆ ಎಂದು ಫ್ರಾನ್ಸ್‌ ಅಧ್ಯಕ್ಷರ ಕಚೇರಿ ತಿಳಿಸಿದೆ. 

ADVERTISEMENT

ಈ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಮುಂದಿನ ಎಐ ಶೃಂಗದ ಆತಿಥ್ಯವನ್ನು ಭಾರತ ವಹಿಸಲಿದೆ ಎನ್ನುವುದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದ್ದಾರೆ.

ಫ್ರಾನ್ಸ್‌ನಲ್ಲಿ ಈ ಬಾರಿ ಮೊದಲ ಎಐ ಆಕ್ಷನ್‌ ಶೃಂಗ ನಡೆದಿದೆ. ಇದಕ್ಕೆ ಮೋದಿ, ಫ್ರಾನ್ಸ್‌ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರನ್‌ ಅವರನ್ನು ಅಭಿನಂದಿಸಿದರು. ಇದೇ ವೇಳೆ ಭಾರತದಲ್ಲಿ  ನಡೆಯಲಿರುವ ಶೃಂಗಕ್ಕೆ ಎಲ್ಲಾ ರೀತಿಯ ಬೆಂಬಲ ನೀಡುವುದಾಗಿ ಮ್ಯಾಕ್ರನ್‌ ಭರವಸೆ ನೀಡಿದರು.

ಶೃಂಗದಲ್ಲಿ ಕೈಗೊಂಡ ಎಐ ಫೌಂಡೇಶನ್‌ ಮತ್ತು ಸುಸ್ಥಿರ ಎಐ ಕೌನ್ಸಿಲ್‌ ರಚನೆ ಮಾಡುವ ನಿರ್ಧಾರವನ್ನು ಮೋದಿ ಸ್ವಾಗತಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.