ADVERTISEMENT

ಬೈಡನ್‌ ಪತ್ನಿ ಜಿಲ್‌ಗೆ ಭಾರತ ಮೂಲದ ಮಾಲಾ ಅಡಿಗ ನೀತಿ ನಿರ್ದೇಶಕಿ

ಏಜೆನ್ಸೀಸ್
Published 21 ನವೆಂಬರ್ 2020, 4:59 IST
Last Updated 21 ನವೆಂಬರ್ 2020, 4:59 IST
ಮಾಲಾ ಅಡಿಗ (ಚಿತ್ರ ಕೃಪೆ: US Department of State)
ಮಾಲಾ ಅಡಿಗ (ಚಿತ್ರ ಕೃಪೆ: US Department of State)   

ವಾಷಿಂಗ್ಟನ್‌: ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ ಅವರು ತಮ್ಮ ಪತ್ನಿ, ರಾಷ್ಟ್ರದ ಪ್ರಥಮ ಮಹಿಳೆ ಅಗಲಿರುವ ಜಿಲ್‌ ಬೈಡನ್‌ ಅವರ ನೀತಿ ನಿರ್ದೇಶಕ ಸ್ಥಾನಕ್ಕೆ ಭಾರತ ಮೂಲದ ಅಮೆರಿಕನ್‌ ಮಾಲಾ ಅಡಿಗ ಅವರನ್ನು ಶುಕ್ರವಾರ ನೇಮಕ ಮಾಡಿದ್ದಾರೆ.

'ಅಮೆರಿಕದ ಶಿಕ್ಷಣ ಮತ್ತು ಸಾಂಸ್ಕೃತಿಕ ವ್ಯವಹಾರಗಳ ಅಡಿಯಲ್ಲಿ ಬರುವ 'ರಾಷ್ಟ್ರೀಯ ಶೈಕ್ಷಣಿಕ ಯೋಜನೆ'ಯಲ್ಲಿ ಸದ್ಯ ಮಾಲಾ ಅಡಿಗ ಉಪ ಸಹಾಯಕ ಕಾರ್ಯದರ್ಶಿಯಾಗಿದ್ದಾರೆ. 2016ರಿಂದ ಅವರು ಈ ಸ್ಥಾನದಲ್ಲಿದ್ದಾರೆ,' ಎಂದು ಅಮೆರಿಕ ಸರ್ಕಾರದ ವೆಬ್‌ಸೈಟ್‌ನಲ್ಲಿ ಉಲ್ಲೆಖಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

ಮಾಲಾ ಅಡಿಗ ಅವರು ಜಿಲ್‌ ಬೈಡನ್‌ ಅವರ ಹಿರಿಯ ಸಲಹೆಗಾರರಾಗಿ ಮತ್ತು ಬೈಡನ್-ಕಮಲಾ ಹ್ಯಾರಿಸ್ ಪ್ರಚಾರ ಅಭಿಯಾನದ ಹಿರಿಯ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಹಿಂದೆ, ಅಡಿಗಾ ಅವರು ಬೈಡೆನ್‌ ಅವರ ಫೌಂಡೇಶನ್‌ನಲ್ಲಿ ಉನ್ನತ ಶಿಕ್ಷಣ ಮತ್ತು ಮಿಲಿಟರಿ ಕುಟುಂಬಗಳ ನಿರ್ದೇಶಕರಾಗಿದ್ದರು.

ಇಲಿನಾಯ್ಸ್‌ನಲ್ಲಿ ನೆಲೆಸಿದ್ದ ಮಾಲಾ ಅವರು, ಮಿನ್ನೇಸೋಟ ವಿಶ್ವವಿದ್ಯಾಲಯದ ಸಾರ್ವಜನಿಕ ಆರೋಗ್ಯ ಶಾಲೆ ವ್ಯಾಪ್ತಿಗೆ ಬರುವ ಗ್ರಿನ್ನೆಲ್ ಕಾಲೇಜಿನಲ್ಲಿ ಪದವಿ ಪಡೆದಿದ್ದಾರೆ. ಅಲ್ಲದೆ, ಚಿಕಾಗೊ ಕಾನೂನು ಶಾಲೆಯಿಂದಲೂ ಕಾನೂನು ಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

ವಕೀಲರೂ ಆಗಿರುವ ಮಾಲಾ ಅಡಿಗ ಅವರು 2008 ರಲ್ಲಿ ಮಾಜಿ ಅಧ್ಯಕ್ಷ ಒಬಾಮಾ ಅವರ ಪ್ರಚಾರ ಅಭಿಯಾನಕ್ಕೆ ಸೇರುವ ಮೊದಲು ಚಿಕಾಗೊ ಕಾನೂನು ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.