ಡೊನಾಲ್ಡ್ ಟ್ರಂಪ್
(ಚಿತ್ರ ಕೃಪೆ: X/@WhiteHouse)
ವಾಷಿಂಗ್ಟನ್: ಇರಾನ್‌ನ ಮೂರು ಪರಮಾಣು ಘಟಕಗಳ ಮೇಲೆ ಬಾಂಬ್ ದಾಳಿ ನಡೆಸಿ ನಾಶಗೊಳಿಸಿರುವ ಬೆನ್ನಲ್ಲೇ ಹೇಳಿಕೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇಸ್ಲಾಮಿಕ್ ರಿಪಬ್ಲಿಕ್ ರಾಷ್ಟ್ರದಲ್ಲಿ ಅಧಿಕಾರ ಬದಲಾವಣೆ ಕುರಿತು ಸೂಚನೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಅಧಿಕಾರ ಬದಲಾವಣೆ ಪದ ಬಳಕೆ ರಾಜಕೀಯವಾಗಿ ಸೂಕ್ತವೆನಿಸುವುದಿಲ್ಲ. ಆದರೆ ಈಗ ಇರಾನ್‌ನಲ್ಲಿರುವ ಆಡಳಿತಕ್ಕೆ 'ಮೇಕ್ ಇರಾನ್ ಗ್ರೇಟ್ ಎಗೈನ್' ಮಾಡಲು ಸಾಧ್ಯವಾಗದಿದ್ದರೆ ಆಡಳಿತ ಬದಲಾವಣೆ ಏಕೆ ಆಗಬಾರದು? ಎಂದು ಹೇಳಿದ್ದಾರೆ.
ಸುರಕ್ಷಿತವಾಗಿ ಬಂದಿಳಿದ ಬಿ-2 ಬಾಂಬರ್...
ಇರಾನ್ ಮೇಲೆ 'ಆಪರೇಷನ್ ಮಿಡ್‌ನೈಟ್ ಹ್ಯಾಮರ್' ಯಶಸ್ವಿ ಕಾರ್ಯಾಚರಣೆಯ ಬಳಿಕ ಅಮೆರಿಕದ ಬಿ-2 ಯುದ್ಧ ವಿಮಾನಗಳು ಸುರಕ್ಷಿತವಾಗಿ ಮಿಸ್ಸೋರಿಯಲ್ಲಿ ಬಂದಿಳಿವೆ ಎಂದು ಟ್ರಂಪ್ ಮಾಹಿತಿ ನೀಡಿದ್ದಾರೆ.
ಇರಾನ್‌ನ ಫೋರ್ಡೊ, ನಟಾನ್ಜ್ ಹಾಗೂ ಎಸ್‌ಫಹಾನ್‌ನಲ್ಲಿರುವ ಪರಮಾಣು ಘಟಕಗಳನ್ನು ಗುರಿಯಾಗಿಸಿ ಅಮೆರಿಕದ ಅತ್ಯಂತ ಶಕ್ತಿಶಾಲಿ ಯುದ್ಧ ವಿಮಾನಗಳು ಬಾಂಬ್ ದಾಳಿ ನಡೆಸಿದ್ದವು.
ಮಗದೊಂದು ಪೋಸ್ಟ್‌ನಲ್ಲಿ ಇರಾನ್ ಮೇಲಿನ ದಾಳಿ ಅತ್ಯಂತ ಕಠಿಣ ಹಾಗೂ ನಿಖರವಾಗಿದ್ದವು. ನಮ್ಮ ಸೇನೆಯ ಸಾಮರ್ಥ್ಯವನ್ನು ತೋರಿಸಿದೆ ಎಂದೂ ಟ್ರಂಪ್ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.