

ಖಾನ್ ಯೂನಿಸ್(ಗಾಜಾ ಪಟ್ಟಿ): ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಇದುವರೆಗೂ 69,169 ಸಾವಿರ ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದು, 1,70,685 ಪ್ಯಾಲೆಸ್ಟೀನಿಯರು ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
2023ರ ಅಕ್ಟೋಬರ್ 7 ರಿಂದಲೂ ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ಜರುಗುತ್ತಿದೆ. ಇತ್ತೀಚೆಗೆ ಅಮೆರಿಕಾದ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಘೋಷಿಸಲಾಗಿದೆ.
ಕದನ ವಿರಾಮದ ನಂತರ ಗಾಜಾ ಪಟ್ಟಿಯಲ್ಲಿನ ಮೃತದೇಹಗಳನ್ನು ಹೊರತೆಗೆಯಲಾಗುತ್ತಿದ್ದು, ಮೃತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
15 ಪ್ಯಾಲೆಸ್ಟೀನಿಯರ ಮೃತದೇಹವನ್ನು ಇಸ್ರೇಲ್ ಶನಿವಾರ ಹಸ್ತಾಂತರಿಸಿದೆ. ಅದರ ನಂತರ ಸಾವಿನ ಲೆಕ್ಕವನ್ನು ಗಾಜಾ ಅಧಿಕಾರಿಗಳು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.