ADVERTISEMENT

ಇರಾನ್‌ನ ಆರು ವಿಮಾನ ನಿಲ್ದಾಣಗಳ ಮೇಲೆ ವೈಮಾನಿಕ ದಾಳಿ: ಇಸ್ರೇಲ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 23 ಜೂನ್ 2025, 7:08 IST
Last Updated 23 ಜೂನ್ 2025, 7:08 IST
<div class="paragraphs"><p>(ಚಿತ್ರ ಕೃಪೆ: X/@IDF)</p></div>

(ಚಿತ್ರ ಕೃಪೆ: X/@IDF)

   

ಟೆಲ್ ಅವೀವ್: ಇರಾನ್‌ನ ಆರು ವಿಮಾನ ನಿಲ್ದಾಣಗಳ ಮೇಲೆ ವೈಮಾನಿಕ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಮಿಲಿಟರಿ ಹೇಳಿದೆ.

ಪಶ್ಚಿಮ, ಪೂರ್ವ ಹಾಗೂ ಕೇಂದ್ರ ಇರಾನ್‌ನ ವಿಮಾನ ನಿಲ್ದಾಣಗಳನ್ನು ಗುರಿಯಾಗಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ತಿಳಿಸಿದೆ.

ADVERTISEMENT

ಯಾವೆಲ್ಲ ವಿಮಾನ ನಿಲ್ದಾಣಗಳಿಗೆ ದಾಳಿ ನಡೆಸಲಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಹೆಚ್ಚಿನ ವಿವರ ಲಭ್ಯವಾಗಿಲ್ಲ.

20 ಐಎಎಫ್ ಯುದ್ಧ ವಿಮಾನಗಳ ಸಹಾಯದಿಂದ ಕ್ಷಿಪಣಿ ಸಂಗ್ರಹ, ಕ್ಷಿಪಣಿ ಉಡ್ಡಯನ ಮೂಲಸೌಕರ್ಯ, ರಾಡಾರ್ ಹಾಗೂ ಉಪಗ್ರಹ ವ್ಯವಸ್ಥೆ ಗುರಿಯಾಗಿಸಿ ದಾಳಿ ನಡೆಸಲಾಗಿದೆ ಎಂದೂ ಐಡಿಎಫ್ ಹೇಳಿದೆ.

ಇರಾನ್‌ನ ಮಿಲಿಟರಿ ಸಾಮರ್ಥ್ಯವನ್ನು ಕುಗ್ಗಿಸುವ ಹಾಗೂ ಇಸ್ರೇಲ್ ನಾಗರಿಕರನ್ನು ರಕ್ಷಿಸುವ ನಿರಂತರ ಕಾರ್ಯಾಚರಣೆಯ ಭಾಗವಾಗಿ ದಾಳಿ ನಡೆಸಲಾಗಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.