ADVERTISEMENT

ಗಾಜಾ ಮೇಲೆ ಇಸ್ರೇಲ್ ದಾಳಿ: 28 ಪ್ಯಾಲೆಸ್ಟೀನಿಯರ ಸಾವು

ಏಜೆನ್ಸೀಸ್
Published 12 ಜುಲೈ 2025, 14:20 IST
Last Updated 12 ಜುಲೈ 2025, 14:20 IST
<div class="paragraphs"><p>ಇಸ್ರೇಲ್ ದಾಳಿಯಿಂದಾಗಿ ಗಾಜಾದಲ್ಲಿನ ಗ್ಯಾಸ್‌ ಸ್ಟೇಷನ್‌ವೊಂದು ನೆಲಸಮವಾಗಿದೆ </p></div>

ಇಸ್ರೇಲ್ ದಾಳಿಯಿಂದಾಗಿ ಗಾಜಾದಲ್ಲಿನ ಗ್ಯಾಸ್‌ ಸ್ಟೇಷನ್‌ವೊಂದು ನೆಲಸಮವಾಗಿದೆ

   

ದೀರ್‌ ಅಲ್–ಬಲಾಹ್‌ (ಗಾಜಾ ಪಟ್ಟಿ): ಗಾಜಾಪಟ್ಟಿ ಮೇಲೆ ಇಸ್ರೇಲ್ ಪಡೆಗಳು ನಡೆಸಿದ ದಾಳಿಯಲ್ಲಿ ನಾಲ್ವರು ಮಕ್ಕಳು ಸೇರಿ 28 ಮಂದಿ ಮೃತಪಟ್ಟಿದ್ದಾರೆ. 

ದೀರ್‌ ಅಲ್‌–ಬಲಾಹ್‌ ಮೇಲೆ ದಾಳಿ ನಡೆದಿದ್ದು, ಮಕ್ಕಳು ಮತ್ತು ಇಬ್ಬರು ಮಹಿಳೆಯರು ಸೇರಿ 13 ಮಂದಿ ಮೃತಪಟ್ಟಿದ್ದಾರೆ ಎಂದು ಅಲ್‌–ಅಕ್ಸಾ ಹುತಾತ್ಮರ ಆಸ್ಪತ್ರೆ ತಿಳಿಸಿದೆ. ಖಾನ್‌ ಯೂನಿಸ್‌ನಲ್ಲಿ 15 ಮಂದಿ ಮೃತಪಟ್ಟಿದ್ದಾರೆ ನಸ್ಸೇರ್‌ ಆಸ್ಪತ್ರೆ ತಿಳಿಸಿದೆ.

ADVERTISEMENT

ಬಂಡುಕೋರರು, ಶಸ್ತ್ರಾಸ್ತ್ರ ಸಂಗ್ರಹಗಾರ, ಕ್ಷಿಪಣಿ ನಿರೋಧಕ ಉಡಾವಣಾ ಕೇಂದ್ರ, ಟನಲ್ ಮತ್ತು ಹಮಾಸ್‌ನ ಮೂಲಸೌಕರ್ಯ ಸೇರಿದಂತೆ ಗಾಜಾಪಟ್ಟಿಯಲ್ಲಿ ಸುಮಾರು 250 ಗುರಿಗಳನ್ನು ಕಳೆದ 48 ಗಂಟೆಯಲ್ಲಿ ನಾಶ ಮಾಡಲಾಗಿದೆ ಎಂದು ಇಸ್ರೇಲ್ ಸೇನೆ ತಿಳಿಸಿದೆ. ಆದರೆ ನಾಗರಿಕರ ಸಾವಿನ ಬಗ್ಗೆ ತಿಳಿಸಿಲ್ಲ.

ಇತ್ತೀಚೆಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ನೆತನ್ಯಾಹು ಅವರೊಂದಿಗೆ ಮಾತುಕತೆ ನಡೆಸಿದ್ದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಕದನ ವಿರಾಮ ಜಾರಿಯಾಗುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದರು. ಆದರೆ, ನೆತನ್ಯಾಹು ಅವರೊಂದಿಗೆ ಮಾತುಕತೆ ನಡೆಸಿದ ಬಳಿಕವೂ ಇಸ್ರೇಲ್‌ ದಾಳಿ ಮುಂದುವರಿಸಿದೆ.

ಲೆಬನಾನ್ ಮೇಲೆ ದಾಳಿ: ಒಂದು ಸಾವು

ಬೈರೂತ್‌ (ಲೆಬನಾನ್‌): ದಕ್ಷಿಣ ಲೆಬನಾನ್‌ ಮೇಲೆ ಶನಿವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಲೆಬನಾನ್‌ ಆರೋಗ್ಯ ಸಚಿವಾಲಯ ತಿಳಿಸಿದೆ. ದಾಳಿಯ ಬಗ್ಗೆ ಇಸ್ರೇಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.