ಬೆಂಜಮಿನ್ ನೇತನ್ಯಾಹು
ಜೆರುಸಲೇಂ: ಇರಾನ್ ಮಾಡಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರ ಯುದ್ಧ ಸಂಪುಟ ಸಮಿತಿ ತೀರ್ಮಾನಿಸಿದೆ. ಆದರೆ ದಾಳಿಯ ಪ್ರಮಾಣ ಹಾಗೂ ಸಮಯದ ಬಗ್ಗೆ ಒಮ್ಮತ ಮೂಡಲಿಲ್ಲ ಎಂದು ಇಸ್ರೇಲ್ ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಪ್ರಧಾನಿ ನೇತನ್ಯಾಹು, ರಕ್ಷಣಾ ಸಚಿವ ಯೋವ್ ಗಲಂಟ್ ಹಾಗೂ ಕ್ಯಾಬಿನೆಟ್ ಸಚಿವ ಬೆನ್ನಿ ಗಂಟ್ಸ್ ಅವರಿರುವ ಐದು ಮಂದಿಯ ಸಚಿವ ಸಂಪುಟ ಭಾನುವಾರ ಸಭೆ ಸೇರಿ ಈ ನಿರ್ಧಾರ ತೆಗೆದುಕೊಂಡಿದೆ. ಮುಂದಿನ ಈ ನಿರ್ಧಾರ ತೆಗೆದುಕೊಳ್ಳಲು ಮತ್ತೆ ಯುದ್ಧ ಸಂಪುಟ ಸಮಿತಿ ಸಭೆ ಸೇರಿಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.