ADVERTISEMENT

ಉತ್ತರ ಗಾಜಾಕ್ಕೆ ಹಿಂತಿರುಗಬೇಡಿ: ಪ್ಯಾಲೆಸ್ಟೀನ್ ಪ್ರಜೆಗಳಿಗೆ ಇಸ್ರೇಲ್

ಏಜೆನ್ಸೀಸ್
Published 15 ಏಪ್ರಿಲ್ 2024, 14:19 IST
Last Updated 15 ಏಪ್ರಿಲ್ 2024, 14:19 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಡೀಲ್ ಅಲ್–ಬಲಾಹ್ (ಗಾಜಾಪಟ್ಟಿ): ಯುದ್ಧಪೀಡಿತ ಗಾಜಾದ ಉತ್ತರ ಭಾಗಕ್ಕೆ ಯಾವುದೇ ಕಾರಣಕ್ಕೂ ವಾಪಸ್ ಬರಬಾರದು ಎಂದು ಪ್ಯಾಲೆಸ್ಟೀನ್ ಪ್ರಜೆಗಳಿಗೆ ಇಸ್ರೇಲ್ ಸೇನೆ ಎಚ್ಚರಿಕೆ ನೀಡಿದೆ. 

ದಾಳಿಗೆ ತುತ್ತಾದ ಉತ್ತರ ಗಾಜಾದಿಂದ ಇತರೆಡೆ ಸ್ಥಳಾಂತರಗೊಂಡವರ ಪೈಕಿ ವಾಪಸ್ ಮನೆಗೆ ಬರಲು ಯತ್ನಿಸುತ್ತಿದ್ದ ಐವರು ನಾಗರಿಕರು ಹತ್ಯೆಗೀಡಾಗಿದ್ದಾರೆ ಎಂದು ಗಾಜಾ ಆಸ್ಪತ್ರೆಯ ಅಧಿಕಾರಿಗಳು ಆರೋಪಿಸಿದ ಮಾರನೇ ದಿನವೇ ಇಸ್ರೇಲ್‌ ಸೇನೆಯ ಈ ಹೇಳಿಕೆ ಹೊರಬಿದ್ದಿದೆ. 

ADVERTISEMENT

ಹಮಾಸ್ ಬಂಡುಕೋರರನ್ನು ಸಂಪೂರ್ಣವಾಗಿ ಸದೆಬಡಿಯುವ ಗುರಿಯೊಂದಿಗೆ ದಾಳಿ ಕೈಗೊಂಡಿರುವ ಇಸ್ರೇಲ್, ಉತ್ತರ ಗಾಜಾವನ್ನು ಗುರಿಯಾಗಿಸಿಕೊಂಡಿದ್ದು, ಬಹುತೇಕ ಭಾಗದಲ್ಲಿದ್ದ ಮನೆಗಳನ್ನು ನೆಲಸಮಗೊಳಿಸಿದೆ. ಇದರಿಂದಾಗಿ ಇಲ್ಲಿ ನೆಲೆ ಕಂಡುಕೊಂಡಿದ್ದ ಹಲವರು ದಕ್ಷಿಣ ಭಾಗಕ್ಕೆ ಸ್ಥಳಾಂತರಗೊಂಡಿದ್ದಾರೆ. ಉತ್ತರ ಗಾಜಾದಲ್ಲಿ ಮುಂದಿನ ಆರು ತಿಂಗಳು ಯುದ್ಧ ಮುಂದುವರಿಯುವ ಕಾರಣ, ಅಲ್ಲಿಯವರೆಗೆ ಯಾರೂ ಈ ಭಾಗಕ್ಕೆ ಬರದಂತೆ ಇಸ್ರೇಲ್ ತಡೆಹಿಡಿದಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.