ADVERTISEMENT

ಗಾಜಾಪಟ್ಟಿ: ವಿಶಾಲ ಪ್ರದೇಶ ವಶಕ್ಕೆ ಇಸ್ರೇಲ್ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2025, 14:14 IST
Last Updated 2 ಏಪ್ರಿಲ್ 2025, 14:14 IST
<div class="paragraphs"><p>ಗಾಜಾದಲ್ಲಿ ಇಸ್ರೇಲ್ ದಾಳಿ</p></div>

ಗಾಜಾದಲ್ಲಿ ಇಸ್ರೇಲ್ ದಾಳಿ

   

–ರಾಯಿಟರ್ಸ್ ಚಿತ್ರ

ಜೆರುಸಲೇಂ: ಗಾಜಾ ಪಟ್ಟಿಯಲ್ಲಿ ವಿಶಾಲ ಪ್ರದೇಶಗಳನ್ನು ವಶಕ್ಕೆ ಪಡೆಯಲು ಇಸ್ರೇಲ್‌ ಸೇನಾ ಕಾರ್ಯಾಚರಣೆ ವಿಸ್ತರಿಸಿದೆ.

ADVERTISEMENT

‘ಪ್ಯಾಲೆಸ್ಟೀನ್‌ ಪ್ರದೇಶದಲ್ಲಿ ಉಗ್ರರ ನೆಲೆಗಳನ್ನು ನಾಶಗೊಳಿಸಿ, ಆ ಪ್ರದೇಶಗಳನ್ನು ಸ್ವಚ್ಛಗೊಳಿಸುವ ಸಲುವಾಗಿ ಸೇನಾ ಆಕ್ರಮಣವನ್ನು ವಿಸ್ತರಿಸಲಾಗುತ್ತಿದೆ. ವಶಪಡಿಸಿಕೊಳ್ಳಲಾಗುವ ವಿಸ್ತಾರವಾದ ಪ್ರದೇಶಗಳನ್ನು ದೇಶದ ಭದ್ರತಾ ಗಡಿಯೊಳಗೆ ಸೇರಿಸಿಕೊಳ್ಳಲಾಗುವುದು’ ಎಂದು ಇಸ್ರೇಲ್‌ ರಕ್ಷಣಾ ಸಚಿವ ಕಾಟ್ಜ್‌ ಬುಧವಾರ ಲಿಖಿತ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಸ್ತರಿತ ಕಾರ್ಯಾಚರಣೆಯಲ್ಲಿ ಗಾಜಾಪಟ್ಟಿಯ ಯಾವೆಲ್ಲ ಪ್ರದೇಶಗಳನ್ನು ವಶಪಡಿಸಿಕೊಳ್ಳಲಾಗುವುದು ಎಂಬುದನ್ನು ಕಾಟ್ಜ್‌ ನಿರ್ದಿಷ್ಟವಾಗಿ ಹೇಳಿಲ್ಲ. ಇದರಲ್ಲಿ, ಈಗ ಯುದ್ಧ ನಡೆಯುತ್ತಿರುವ ಪ್ರದೇಶಗಳಿಂದ ಜನರನ್ನು ವ್ಯಾಪಕವಾಗಿ ಸ್ಥಳಾಂತರ ಮಾಡುವುದು ಸೇರಿದೆ ಎಂದು ಅವರು ಹೇಳಿದ್ದಾರೆ.

ದಕ್ಷಿಣದ ನಗರ ರಫಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಿಂದ ಜನರ ಸಂಪೂರ್ಣ ಸ್ಥಳಾಂತರಕ್ಕೆ ಇಸ್ರೇಲ್‌ ಆದೇಶ ನೀಡಿದ ಬೆನ್ನಲ್ಲೆ, ಕಾಟ್ಜ್‌ ಅವರಿಂದ ಈ ಹೇಳಿಕೆ ಹೊರಬಿದ್ದಿದೆ.

‘ಹಮಾಸ್ ಸಂಘಟನೆಯನ್ನು ಹೊರದಬ್ಬಬೇಕು ಮತ್ತು ಎಲ್ಲ ಒತ್ತೆಯಾಳುಗಳನ್ನು ವಾಪಸ್‌ ಕಳುಹಿಸಬೇಕು’ ಎಂದು ಗಾಜಾ ನಿವಾಸಿಗಳಿಗೆ ಕರೆ ನೀಡಿದ ಕಾಟ್ಜ್‌, ‘ಯುದ್ಧವನ್ನು ಕೊನೆಗೊಳಿಸಲು ಇದೊಂದೇ ಮಾರ್ಗವಾಗಿದೆ’ ಎಂದು ಹೇಳಿದ್ದಾರೆ. 

ಹಮಾಸ್‌ ಬಳಿ ಇನ್ನೂ 59 ಒತ್ತೆಯಾಳುಗಳು ಇದ್ದಾರೆ. ಇವರಲ್ಲಿ 24 ಮಂದಿ ಈಗಲೂ ಬದುಕಿದ್ದಾರೆ ಎಂದು ನಂಬಲಾಗಿದೆ. ಬಾಕಿ ಒತ್ತೆಯಾಳುಗಳಲ್ಲಿ ಹೆಚ್ಚಿನವರನ್ನು ಕದನ ವಿರಾಮದ ಒಪ್ಪಂದಗಳಡಿ ಈಗಾಗಲೇ ಬಿಡುಗಡೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.