ADVERTISEMENT

ಚೀನಾಗೆ ತಕ್ಕ ಶಾಸ್ತಿ ಮಾಡಲು ಸಿದ್ಧವಾದ ಜಪಾನ್: 1000 ಮಿಸೈಲ್‌ ನಿಯೋಜನೆಗೆ ತಯಾರಿ

ಏಜೆನ್ಸೀಸ್
Published 21 ಆಗಸ್ಟ್ 2022, 11:46 IST
Last Updated 21 ಆಗಸ್ಟ್ 2022, 11:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಟೊಕಿಯೊ: ಚೀನಾದಿಂದ ಉಂಟಾಗಿರುವ ಪ್ರಾದೇಶಿಕ ಬೆದರಿಕೆಗಳಿಗೆ ತಕ್ಕ ಶಾಸ್ತಿ ಮಾಡಲು ಜಪಾನ್ ಮುಂದಾಗಿದೆ.

ಚೀನಾ ಹಾಗೂ ಉತ್ತರ ಕೊರಿಯಾದ ಕರಾವಳಿಗಳನ್ನು ತಲುಪಬಲ್ಲ ಅತ್ಯಂತ ಶಕ್ತಿಶಾಲಿ 1,000 ಕ್ರೂಸ್ ಮಿಸೈಲ್‌ಗಳನ್ನು (ನೀರು, ನೆಲದ ಮೇಲೆ ದಾಳಿ ಮಾಡಲು ಸಿದ್ದವಿರುವ ಕ್ಷಿಪಣಿಗಳು) ತನ್ನ ನೌಕಾಪಡೆಗೆ ನಿಯೋಜಿಸಲು ಜಪಾನ್ ತಯಾರಾಗಿದೆ ಎಂದು ಅಲ್ಲಿನ ಸ್ಥಳೀಯ ಪತ್ರಿಕೆ ‘ಯೊಮಿಯೂರಿ ಶಿಂಬುನ್’ ಭಾನುವಾರ ವರದಿ ಮಾಡಿದೆ.

ಈ ಕ್ಷಿಪಣಿಗಳು 100 ಕಿ.ಮೀ ಇಂದ ಬರೋಬ್ಬರಿ 1000 ಕಿಮೀ ವರೆಗೆ ಗುರಿ ತಲುಪಬಲ್ಲವು ಎಂದು ವರದಿ ಹೇಳಿದೆ.

ADVERTISEMENT

ಈಗಾಗಲೇ ಅಸ್ತಿತ್ವದಲ್ಲಿರುವ ಹಡಗುಗಳಿಗೆ ಹಾಗೂ ಯುದ್ಧ ವಿಮಾನಗಳಿಗೆ ಕ್ರೂಸ್ ಮಿಸೈಲ್‌ಗಳನ್ನು ಅಳವಡಿಸುವ ವ್ಯವಸ್ಥೆಯನ್ನು ಉನ್ನತೀಕರಿಸಲಾಗಿದೆ ಎಂದು ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.

ಈ ಬಹುತೇಕ ಕ್ಷಿಪಣಿಗಳನ್ನು ನೈರುತ್ಯ ವಲಯದಲ್ಲಿತೈವಾನ್ ಬಳಿ ನಿಯೋಜಿಸಲು ಜಪಾನ್ ಮುಂದಾಗಿದೆ ಎಂದು ವರದಿ ತಿಳಿಸಿದೆ.

ಚೀನಾ ಹಾಗೂ ಉತ್ತರ ಕೊರಿಯಾದ ಮಿಸೈಲ್ ಶಕ್ತಿಗೆ ಕೌಂಟರ್ ಕೊಡಲು ಜಪಾನ್ ಈ ದೊಡ್ಡ ಯತ್ನಕ್ಕೆ ಮುಂದಾಗಿದೆ. ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿರುವುದು ಹಾಗೂ ಚೀನಾ ತೈವಾನ್ ಮೇಲೆ ಕೆಂಗೆಣ್ಣು ಬೀರಿದ್ದು ಜಪಾನ್‌ ರಕ್ಷಣಾ ಇಲಾಖೆಯಲ್ಲಿ ಈ ಬದಲಾವಣೆಗೆ ಕಾರಣ ಎನ್ನಲಾಗಿದೆ.

ಇನ್ನೊಂದೆಡೆ ಈ ಸಾರಿಯ ಜಪಾನ್ ಬಜೆಟ್‌ನಲ್ಲಿ ರಕ್ಷಣಾ ಇಲಾಖೆಯ ವೆಚ್ಚವನ್ನು 35 ಲಕ್ಷ ಕೋಟಿ ರೂಪಾಯಿಯಿಂದ 40 ಲಕ್ಷ ಕೋಟಿ ರೂಪಾಯಿಗೆಹೆಚ್ಚಳ ಮಾಡಲು ಮುಂದಾಗಿದ್ದಾರೆ ಎಂದೂ ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.