ADVERTISEMENT

ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ 'ಯುದ್ಧಾ‍ಪರಾಧಿ': ಜೋ ಬೈಡನ್‌

ಪಿಟಿಐ
Published 17 ಮಾರ್ಚ್ 2022, 1:41 IST
Last Updated 17 ಮಾರ್ಚ್ 2022, 1:41 IST
ಭೋಪಾಲ್‌: ರಷ್ಯಾ ಮತ್ತು ಉಕ್ರೇನ್‌ ಬಾವುಟದ ಬಣ್ಣವನ್ನು ಮುಖಕ್ಕೆ ಹಚ್ಚಿಕೊಂಡ ವ್ಯಕ್ತಿಯೊಬ್ಬರು ಯುದ್ಧವನ್ನು ನಿಲ್ಲಿಸುವಂತೆ ವ್ಲಾಡಿಮಿರ್‌ ಪುಟಿನ್‌ ಹಾಗೂ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರಿಗೆ ಮನವಿ ಮಾಡಿದರು. (ಪಿಟಿಐ ಚಿತ್ರ)
ಭೋಪಾಲ್‌: ರಷ್ಯಾ ಮತ್ತು ಉಕ್ರೇನ್‌ ಬಾವುಟದ ಬಣ್ಣವನ್ನು ಮುಖಕ್ಕೆ ಹಚ್ಚಿಕೊಂಡ ವ್ಯಕ್ತಿಯೊಬ್ಬರು ಯುದ್ಧವನ್ನು ನಿಲ್ಲಿಸುವಂತೆ ವ್ಲಾಡಿಮಿರ್‌ ಪುಟಿನ್‌ ಹಾಗೂ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರಿಗೆ ಮನವಿ ಮಾಡಿದರು. (ಪಿಟಿಐ ಚಿತ್ರ)   

ವಾಷಿಂಗ್ಟನ್‌: ಉಕ್ರೇನ್‌ ಮೇಲೆ ದಾಳಿಯನ್ನು ಮುಂದುವರಿಸಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರನ್ನು 'ಯುದ್ಧಾ‍ಪರಾಧಿ' ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಕರೆದಿದ್ದಾರೆ.

ಶ್ವೇತಭವನದಲ್ಲಿ ಬುಧವಾರ ಮಾಧ್ಯಮದ ಪ್ರಶ್ನೆಗೆ ಉತ್ತರಿಸುವ ವೇಳೆ ಬೈಡನ್‌, 'ನನ್ನ ಪ್ರಕಾರ ಆತ(ಪುಟಿನ್‌) ಯುದ್ಧಾ‍ಪರಾಧಿ' ಎಂದಿದ್ದಾರೆ.

ಇದಾದ ಬಳಿಕ ತಕ್ಷಣ ಪ್ರತಿಕ್ರಿಯೆ ನೀಡಿರುವ ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್‌ ಪಿಸಾಕಿ ಅವರು, 'ಅಧ್ಯಕ್ಷರ ಹೇಳಿಕೆಯು ವೈಯಕ್ತಿಕ' ಎಂದಿದ್ದಾರೆ.

ADVERTISEMENT

'ಪುಟಿನ್‌ ಬಗೆಗಿನ ಅಧ್ಯಕ್ಷರ ಹೇಳಿಕೆಯು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಭಾವಿಸುತ್ತೇನೆ. ಅದು ಅವರ ಹೃದಯದ ಮಾತಾಗಿದೆ. ಬೇರೆ ರಾಷ್ಟ್ರದ ಮೇಲೆ ಅತಿಕ್ರಮಣ ಮಾಡುವ ಮೂಲಕ ಕ್ರೂರ ಸರ್ವಾಧಿಕಾರಿ ಧೋರಣೆಯನ್ನು ಪುಟಿನ್‌ ಪ್ರದರ್ಶಿಸಿದ್ದಾರೆ. ಈ ನಡೆಯ ಕುರಿತು ಅಧ್ಯಕ್ಷರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ' ಎಂದು ಜೆನ್‌ ಪಿಸಾಕಿ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.