ADVERTISEMENT

ಅಮೆರಿಕದ 3 ಯುದ್ಧ ವಿಮಾನ ಹೊಡೆದುರುಳಿಸಿದ ಕುವೈತ್

ಏಜೆನ್ಸೀಸ್
Published 2 ಮಾರ್ಚ್ 2026, 20:59 IST
Last Updated 2 ಮಾರ್ಚ್ 2026, 20:59 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕುವೈತ್ ಸಿಟಿ: ಕುವೈತ್ ವಾಯು ರಕ್ಷಣಾ ವ್ಯವಸ್ಥೆಯು ಭಾನುವಾರ ರಾತ್ರಿ ಅಮೆರಿಕದ ಮೂರು ಯುದ್ಧ ವಿಮಾನಗಳನ್ನು ಪ್ರಮಾದವಶಾತ್ ಹೊಡೆದುರುಳಿಸಿದೆ ಎಂದು ಅಮೆರಿಕ ಸೇನೆ ತಿಳಿಸಿದೆ.

‘ಆಪರೇಷನ್ ಎಪಿಕ್‌ ಫ್ಯೂರಿ’ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಮೂರು ‘ಎಫ್‌–15ಇ’ ಯುದ್ಧ ವಿಮಾನಗಳು ಕುವೈತ್‌ನಲ್ಲಿ ಪತನಗೊಂಡವು. ಕುವೈತ್‌ನ ವಾಯು ರಕ್ಷಣಾ ವ್ಯವಸ್ಥೆಯು ತಪ್ಪಾಗಿ ಈ ವಿಮಾನಗಳನ್ನು ಹೊಡೆದುರುಳಿಸಿದೆ. ಪೈಲಟ್‌ ಸೇರಿದಂತೆ ಎಲ್ಲ ಆರು ಸಿಬ್ಬಂದಿ ಜಿಗಿದು ಪಾರಾಗಿದ್ದು, ಸುರಕ್ಷಿತವಾಗಿದ್ದಾರೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

‘ಈ ಪ್ರಮಾದವನ್ನು ಕುವೈತ್‌ ಒಪ್ಪಿಕೊಂಡಿದೆ. ಕುವೈತ್‌ ಭದ್ರತಾ ಪಡೆಗಳ ಪ್ರಯತ್ನಗಳು ಮತ್ತು ಈ ಕಾರ್ಯಾಚರಣೆಯಲ್ಲಿ ಅವರ ಬೆಂಬಲಕ್ಕೆ ನಾವು ಕೃತಜ್ಞರಾಗಿರುತ್ತೇವೆ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.