ADVERTISEMENT

ಲಾಸ್ ಏಂಜಲೀಸ್ ಕಾಳ್ಗಿಚ್ಚು: 10 ಮಂದಿ ಸಾವು; ಅವಶೇಷಗಳ ಬಳಿ ಹೆಚ್ಚಿದ ಲೂಟಿ

ಏಜೆನ್ಸೀಸ್
Published 10 ಜನವರಿ 2025, 7:23 IST
Last Updated 10 ಜನವರಿ 2025, 7:23 IST
<div class="paragraphs"><p>ವ್ಯಕ್ತಿಯೊಬ್ಬರು ಸುಟ್ಟು ಬೂದಿಯಾದ ಮನೆಯ ಬಳಿ ಇರುವುದು</p></div>

ವ್ಯಕ್ತಿಯೊಬ್ಬರು ಸುಟ್ಟು ಬೂದಿಯಾದ ಮನೆಯ ಬಳಿ ಇರುವುದು

   

ರಾಯಿಟರ್ಸ್‌ ಚಿತ್ರ

ನ್ಯೂಯಾರ್ಕ್‌: ಕ್ಯಾಲಿಪೋರ್ನಿಯಾದ ಲಾಸ್‌ಏಂಜಲೀಸ್‌ನಲ್ಲಿ ಉಲ್ಬಣಿಸಿರುವ ಕಾಳ್ಗಿಚ್ಚಿಗೆ ಬಲಿಯಾದವರ ಸಂಖ್ಯೆ 10ಕ್ಕೆ ಏರಿದೆ.

ADVERTISEMENT

ಅಮೆರಿಕದ ಚಿತ್ರೋದ್ಯಮಕ್ಕೆ ಮನೆಯಂತಿದ್ದ ಹಾಲಿವುಡ್‌ ಪ್ರದೇಶ ಸಂಪೂರ್ಣ ನಾಶವಾಗಿದ್ದು, ಪ್ರಿಯಾಂಕಾ ಚೋಪ್ರಾ, ನೋರಾ ಫತೇಹಿ ಸೇರಿ ಹಲವು ನಟ–ನಟಿಯರ ಮನೆಗಳು ಸುಟ್ಟು ಭಸ್ಮವಾಗಿವೆ.

‘ಈವರೆಗೆ 10 ಮೃತದೇಹಗಳ ದೊರಕಿವೆ. ಎಷ್ಟು ಜನ ಮೃತಪಟ್ಟಿದ್ದಾರೆ ಎನ್ನುವ ಬಗ್ಗೆ ಖಚಿತವಾಗಿಲ್ಲ, ಬೆಂಕಿ ಆವರಿಸಿಕೊಂಡಿರುವ ಪ್ರದೇಶದಲ್ಲಿ ರಕ್ಷಣಾ ಕಾರ್ಯ ಸಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ’ ಎಂದು ವೈದ್ಯಕೀಯ ಪರೀಕ್ಷಕರ ವಿಭಾಗ ಹೇಳಿಕೆ ಉಲ್ಲೇಖಿಸಿ ವರದಿಯಾಗಿದೆ.

ಲೂಟಿ ಆರಂಭ

ಕಾಳ್ಗಿಚ್ಚಿನ ಬೆಂಕಿ ಹೊತ್ತಿಉರಿದು ಅವಶೇಷಗಳು ಬಾಕಿಯಾದ ಪ್ರದೇಶಗಳಲ್ಲಿ ಲೂಟಿ, ಕಳ್ಳತನ ಆರಂಭವಾಗಿದೆ. ಈ ಹಿನ್ನೆಲೆ ಭದ್ರತಾ ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ಬೆಂಕಿ ನಿಯಂತ್ರಿಸಲು ರಾತ್ರಿ ವೇಳೆಯೂ ಕಾರ್ಯಾಚರಣೆ ಮುಂದುವರಿದಿದೆ ಈ ವೇಳೆ ಕಳ್ಳತನವಾಗುತ್ತಿರುವುದು ಗಮನಕ್ಕೆ ಬಂದಿದೆ, ಹೀಗಾಗಿ ಸ್ಥಳೀಯ ಅಧಿಕಾರಿಗಳೂ ಕ್ರಮ ಕೈಗೊಂಡಿದ್ದಾರೆ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.