ಪ್ರಾತಿನಿಧಿಕ ಚಿತ್ರ
ಕ್ವಾಲಾಲಂಪುರ: ಮಲೇಷ್ಯಾದ ಈಶಾನ್ಯ ರಾಜ್ಯವಾದ ಕೆಲಂಟಾನ್ ನಗರದಲ್ಲಿ ಆಯೋಜನೆಗೊಂಡಿದ್ದ ‘ಗೇ ಪಾರ್ಟಿ’ ಮೇಲೆ ದಾಳಿ ನಡೆಸಿರುವ ಪೊಲೀಸರು ಹತ್ತಾರು ಪುರುಷರನ್ನು ಗುರುವಾರ ಬಂಧಿಸಿದ್ದಾರೆ.
ಮುಸ್ಲಿಂ ಪ್ರಾಬಲ್ಯವಿರುವ ಮಲೇಷ್ಯಾದಲ್ಲಿ ಸಲಿಂಗಕಾಮ ಅಪರಾಧ ಎಂದೇ ಪರಿಗಣಿಸಲಾಗುತ್ತದೆ. ಲೆಸ್ಬಿಯನ್, ಗೇ, ಬೈಸೆಕ್ಷುಯಲ್ ಮತ್ತು ಲಿಂಗತ್ವ ಅಲ್ಪಸಂಖ್ಯಾತರತ್ತ ಹೆಚ್ಚುತ್ತಿರುವ ಅಸಿಹಿಷ್ಣುತೆ ಕುರಿತು ಬಲಪಂತೀಯರು ಸರ್ಕಾರವನ್ನು ಎಚ್ಚರಿಸಿದ್ದರು. ಇದರ ಬೆನ್ನಲ್ಲೇ ನಡೆದ ಈ ದಾಳಿಯಲ್ಲಿ 20ಕ್ಕೂ ಹೆಚ್ಚು ಪುರುಷರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
‘ಸ್ಥಳವನ್ನು ಬಾಡಿಗೆ ಪಡೆದಿದ್ದ ಗೇ ಗುಂಪು, ಅಲ್ಲಿ ಪಾರ್ಟಿ ಆಯೋಜಿಸಿದ್ದರು. ಸ್ಥಳದಲ್ಲಿ ಕಾಂಡೋಮ್‌ಗಳು ಮತ್ತು ಎಚ್‌ಐವಿ ಔಷಧಗಳು ಪತ್ತೆಯಾಗಿವೆ. ಆದರೆ ಲೈಂಗಿಕ ಕ್ರಿಯೆ ನಡೆದ ಕುರಿತು ಯಾವುದೇ ಪುರಾವೆಗಳು ಲಭ್ಯವಾಗಿಲ್ಲ. ಬಂಧಿತರಲ್ಲಿ ಕೆಲವರ ಮೊಬೈಲ್‌ಗಳಲ್ಲಿ ಸಲಿಂಗಕಾಮಕ್ಕೆ ಸಂಬಂಧಿಸಿದಂತೆ ಅಶ್ಲೀಲ ದೃಶ್ಯಗಳು ದೊರೆತಿವೆ’ ಎಂದು ಪೊಲೀಸರು ಹೇಳಿದ್ದಾರೆ.
‘ಇಂಥ ವರ್ತನೆಗಳು ಆತಂಕ ಮೂಡಿಸಿವೆ. ಗೇ ಸಮುದಾಯದ ಚಲನವಲನಗಳ ಕುರಿತು ನಿರಂತರ ನಿಗಾ ವಹಿಸಲಾಗುವುದು’ ಎಂದು ಪೊಲೀಸರು ಹೇಳಿದ್ದಾರೆ.
ಎಲ್‌ಜಿಬಿಟಿಕ್ಯೂ ಸಮುದಾಯದ ಮೇಲಿನ ದಾಳಿ ಮಲೇಷ್ಯಾದಲ್ಲಿ ಹೆಚ್ಚಿಸಲಾಗಿದೆ. ಇಸ್ಲಾಮ್‌ನ ಷರಿಯಾ ಕಾನೂನಿನಲ್ಲಿ ಸಲಿಂಗಕಾಮ ಮತ್ತು ಪುರುಷರು ಮಹಿಳೆಯರಂತೆ ಹಾಗೂ ಮಹಿಳೆಯರು ಪುರುಷರಂತೆ ಉಡುಪು ಧರಿಸುವುದನ್ನು ನಿಷೇಧಿಸಲಾಗಿದೆ.
2023ರಲ್ಲಿ ಆಯೋಜನೆಗೊಂಡಿದ್ದ ಸಂಗೀತ ಕಾರ್ಯಕ್ರಮದಲ್ಲಿ ‘ದಿ 1975’ ಬ್ರಿಟಿಷ್ ಪಾಪ್ ಗಾಯಕ ತನ್ನ ತಂಡದ ಸದಸ್ಯನನ್ನು ವೇದಿಕೆಯಲ್ಲೇ ಚುಂಬಿಸಿದ್ದರು. ಜತೆಗೆ ಮಲೇಷ್ಯಾದ ಎಲ್‌ಜಿಬಿಟಿಕ್ಯೂ ವಿರೋಧಿ ಕಾನೂನನ್ನು ಖಂಡಿಸಿದ್ದರು.
2018ರಲ್ಲಿ ಲೆಸ್ಬಿಯನ್‌ಗಳು ನ್ಯಾಯಾಲಯದಲ್ಲೇ ಬಹಿರಂಗವಾಗಿ ಪ್ರಣಯಕೇಳಿ ನಡೆಸಿದ್ದರು. ಇದಕ್ಕಾಗಿ ಇವರಿಗೆ ಶಿಕ್ಷೆ ವಿಧಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.