ADVERTISEMENT

ಪ್ರಧಾನಿ ಮೋದಿಗೆ ಮಾಲ್ಡೀವ್ಸ್‌ ಅತ್ಯುನ್ನತ ಗೌರವ

ಏಜೆನ್ಸೀಸ್
Published 8 ಜೂನ್ 2019, 9:56 IST
Last Updated 8 ಜೂನ್ 2019, 9:56 IST
   

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರಿಗೆಮಾಲ್ಡೀವ್ಸ್‌ ಸರ್ಕಾರ ವಿದೇಶಿ ಗಣ್ಯರಿಗೆ ನೀಡುವ ಅತ್ಯುನ್ನತ ಗೌರವ ‘ನಿಶಾನ್ ಇಜುದ್ದೀನ್‌’ ಘೋಷಣೆ ಮಾಡಲಾಗಿದೆ. ಎರಡನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಮೋದಿ ಅವರು ಇಂದು ಮಾಲ್ಡೀವ್ಸ್‌ಗೆ ತೆರಳಿದ್ದಾರೆ.

ಮೋದಿ ಅವರಿಗೆ ಅತ್ಯುನ್ನತ ಗೌರವ ನೀಡುವ ಬಗ್ಗೆ ಮಾಲ್ಡೀವ್ಸ್‌ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿ ನಿರ್ಧಾರ ಕೈಗೊಂಡಿದ್ದು, ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಘೋಷಣೆ ಮಾಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅಬ್ದುಲ್ಲಾ ಶಾಹಿದ್, ‘ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ, ವಿದೇಶಿ ಗಣ್ಯರಿಗೆ ನೀಡುವ ಅತ್ಯುನ್ನತ ಗೌರವ ನೀಡುವುದಾಗಿ ಅಧ್ಯಕ್ಷರು ಘೋಷಣೆ ಮಾಡಿದ್ದಾರೆ. ಇಂದು ಪ್ರಧಾನಿಯವರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಅವರಿಗೆ ನಮಸ್ಕಾರ, ಸ್ವಾಗತ’ ಎಂದು ಉಲ್ಲೇಖಿಸಿದ್ದಾರೆ.

ADVERTISEMENT

ವಿದೇಶ ಪ್ರವಾಸ ತೆರಳುವ ಮುನ್ನ ಮಾತನಾಡಿದ ಮೋದಿ, ತಮ್ಮಮಾಲ್ಡೀವ್ಸ್‌ ಭೇಟಿಯು ನೆರೆಯ ಮತ್ತು ದೀರ್ಘಾವಧಿಯ ಮಿತ್ರರಾಷ್ಟ್ರವಾಗಿ ಉಭಯ ದೇಶಗಳ ನಡುವಣ ಬಾಂಧವ್ಯದ ಮಹತ್ವವನ್ನು ಬಿಂಬಿಸುತ್ತಿದೆ ಎಂದಿದ್ದಾರೆ.ಮೋದಿ 2018ರ ನವೆಂಬರ್‌ನಲ್ಲಿ ಮಾಲ್ಡೀವ್ಸ್‌ಗೆ ತೆರಳಿದ್ದು, ಇಬ್ರಾಹಿಂ ಮೊಹಮ್ಮದ್ ಸೊಲಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆದರೆ, ದ್ವಿಪಕ್ಷೀಯ ಮಾತುಕತೆಗಾಗಿ ಅಲ್ಲಿಗೆ ತೆರಳುತ್ತಿರುವುದು ಇದೇ ಮೊದಲು.

ಇನ್ನಷ್ಟು...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.