
ವಾಷಿಂಗ್ಟನ್: ಇಡೀ ಜಗತ್ತು ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಅಳವಡಿಕೆಯತ್ತ ದಾಪುಗಾಲಿಡುತ್ತಿರುವ ನಡುವೆಯೇ, ಭಯೋತ್ಪಾದಕ ಸಂಘಟನೆಗಳು ಸಹ ತಮ್ಮ ದುಷ್ಕೃತ್ಯಗಳಿಗೆ ಎಐ ತಂತ್ರಜ್ಞಾನವನ್ನು ಬಳಕೆ ಮಾಡುತ್ತಿವೆ ಎಂಬ ಆಘಾತಕಾರಿ ವಿಷಯ ತಿಳಿದುಬಂದಿದೆ.
ಉಗ್ರ ಸಂಘಟನೆಗಳು ಯಾವ ರೀತಿಯಲ್ಲಿ ಎಐ ತಂತ್ರಜ್ಞಾನ ಅಳವಡಿಸಿಕೊಳ್ಳುತ್ತಿವೆ ಎಂಬ ಮಾಹಿತಿ ಲಭ್ಯವಾಗಿಲ್ಲ.
‘ಹೊಸ ಸದಸ್ಯರ ನೇಮಕಾತಿ, ಡೀಪ್ ಫೇಕ್ ಚಿತ್ರಗಳ ಸೃಷ್ಟಿ, ಸೈಬರ್ ದಾಳಿ ಮುಂತಾದ ಉದ್ದೇಶಗಳಿಗೆ ಉಗ್ರ ಸಂಘಟನೆಗಳು ಎಐ ತಂತ್ರಜ್ಞಾನವನ್ನು ಪ್ರಮುಖ ಸಾಧನವಾಗಿ ಬಳಸಿಕೊಳ್ಳುವ ಅಪಾಯವಿದೆ’ ಎಂದು ರಾಷ್ಟ್ರೀಯ ಭದ್ರತಾ ತಜ್ಞರು ಮತ್ತು ಗುಪ್ತಚರ ದಳದವರು ಎಚ್ಚರಿಕೆ ನೀಡಿದ್ದಾರೆ.
‘ಆರ್ಥಿಕವಾಗಿ ಅಷ್ಟೇನೂ ಶಕ್ತವಿರದ, ಹೆಚ್ಚು ಸದಸ್ಯ ಬಲವನ್ನೂ ಹೊಂದಿರದ ಉಗ್ರ ಸಂಘಟನೆಯೂ ಎಐ ತಂತ್ರಜ್ಞಾನದ ಬಲದಿಂದ ತನ್ನ ಕಬಂಧಬಾಹುವನ್ನು ವಿಸ್ತರಿಸುವ ಅಪಾಯವಿದೆ’ ಎಂದು ತಿಳಿಸಿವೆ.
ಎಐ ತಂತ್ರಜ್ಞಾನವನ್ನು ಉಗ್ರ ಕಾರ್ಯಾಚರಣೆಗಳ ಭಾಗವಾಗಿಸಲು ‘ಇಸ್ಲಾಮಿಕ್ ಸ್ಟೇಟ್’ ಸಂಘಟನೆಯ ಬೆಂಬಲಿಗರಿಗೆ ಇತ್ತೀಚೆಗೆ ವೆಬ್‌ಸೈಟ್ ಮೂಲಕ ಕರೆ ನೀಡಲಾಗಿದೆ. ‘ಉಗ್ರರ ನೇಮಕಾತಿಗೆ ಎಐ ಬಳಸಬಹುದು’ ಎಂದು ಕೆಲ ಗುಪ್ತಚರ ಸಂಸ್ಥೆಗಳು ಕಳವಳ ವ್ಯಕ್ತಪಡಿಸಿವೆ. ಅವರ ದುಃಸ್ವಪ್ನವನ್ನು ನಿಜವಾಗಿಸೋಣ’ ಎಂದು ಹೇಳಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.