ADVERTISEMENT

ಬ್ರಿಟನ್ ದೊರೆಗೆ ವಿಶೇಷ ಉಡುಗೊರೆ ನೀಡಿದ ಪ್ರಧಾನಿ ಮೋದಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜುಲೈ 2025, 6:26 IST
Last Updated 25 ಜುಲೈ 2025, 6:26 IST
<div class="paragraphs"><p>ನರೇಂದ್ರ&nbsp;ಮೋದಿ ಹಾಗೂ&nbsp;ಬ್ರಿಟನ್ ದೊರೆ 3ನೇ ಕಿಂಗ್ಸ್ ಚಾರ್ಲ್ಸ್</p></div>

ನರೇಂದ್ರ ಮೋದಿ ಹಾಗೂ ಬ್ರಿಟನ್ ದೊರೆ 3ನೇ ಕಿಂಗ್ಸ್ ಚಾರ್ಲ್ಸ್

   

(ಚಿತ್ರ–@RoyalFamily)

ಲಂಡನ್‌: ಪ್ರಧಾನಿ ನರೇಂದ್ರ ಮೋದಿ ಅವರು, ಬ್ರಿಟನ್ ದೊರೆ 3ನೇ ಕಿಂಗ್ಸ್ ಚಾರ್ಲ್ಸ್ ಅವರನ್ನು ಗುರುವಾರ ಭೇಟಿಯಾದರು. ಈ ವೇಳೆ ಅವರು ಚಾರ್ಲ್ಸ್ ಅವರಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ.

ADVERTISEMENT

'ಏಕ್ ಪೇಡ್ ಮಾ ಕೆ ನಾಮ್' (ತಾಯಿಯ ಹೆಸರಿನಲ್ಲಿ ಒಂದು ಮರ) ಅಭಿಯಾನದ ಭಾಗವಾಗಿ 3ನೇ ಕಿಂಗ್ ಚಾರ್ಲ್ಸ್ ಅವರಿಗೆ ಗಿಡವೊಂದನ್ನು ಪ್ರಧಾನಿ ಮೋದಿ ಉಡುಗೊರೆಯಾಗಿ ನೀಡಿದ್ದಾರೆ. ಈ ಬಗ್ಗೆ ರಾಜಮನೆತನ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದೆ.

ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ

ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದವೊಂದಕ್ಕೆ ಭಾರತ ಮತ್ತು ಬ್ರಿಟನ್ ಗುರುವಾರ ಸಹಿ ಮಾಡಿವೆ. ಇದು ಎರಡೂ ದೇಶಗಳ ಪಾಲಿಗೆ ಐತಿಹಾಸಿಕ ದಿನ ಎಂದು ನಾನು ಭಾವಿಸಿದ್ದೇನೆ. ನಾವು ನೀಡಿದ್ದ ಭರವಸೆಯನ್ನು ಈಡೇರಿಸುತ್ತಿರುವುದಕ್ಕೆ ನನಗೆ ಸಂತಸವಾಗುತ್ತಿದೆ ಎಂದು ಬ್ರಿಟನ್ ಪ್ರಧಾನಿ ಕಿಯರ್ ಸ್ಟಾರ್ಮರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.