ADVERTISEMENT

ರಷ್ಯಾ ಆಕ್ರಮಣ: 5 ಲಕ್ಷಕ್ಕೂ ಅಧಿಕ ಜನರು ಉಕ್ರೇನ್ ತೊರೆದಿದ್ದಾರೆ- ವಿಶ್ವಸಂಸ್ಥೆ

ಏಜೆನ್ಸೀಸ್
Published 28 ಫೆಬ್ರುವರಿ 2022, 14:18 IST
Last Updated 28 ಫೆಬ್ರುವರಿ 2022, 14:18 IST
ರಷ್ಯಾ ಆಕ್ರಮಣದಿಂದಾಗಿ ಉಕ್ರೇನ್ ತೊರೆದು ರೊಮೇನಿಯಾ ಗಡಿಗೆ ತಲುಪಿರುವ ಜನರು (ಚಿತ್ರ- ರಾಯಿಟರ್ಸ್)
ರಷ್ಯಾ ಆಕ್ರಮಣದಿಂದಾಗಿ ಉಕ್ರೇನ್ ತೊರೆದು ರೊಮೇನಿಯಾ ಗಡಿಗೆ ತಲುಪಿರುವ ಜನರು (ಚಿತ್ರ- ರಾಯಿಟರ್ಸ್)   

ಜಿನೆವಾ: ಐದು ದಿನಗಳ ಹಿಂದೆ ರಷ್ಯಾ ತನ್ನ ಪೂರ್ಣ ಪ್ರಮಾಣದ ಆಕ್ರಮಣವನ್ನು ಪ್ರಾರಂಭಿಸಿದ ನಂತರ ಅರ್ಧ ಮಿಲಿಯನ್‌ಗಿಂತಲೂ ಅಧಿಕ ಜನರು ಉಕ್ರೇನ್‌ನಿಂದ ಪಲಾಯನ ಮಾಡಿದ್ದಾರೆ. ಈ ಪೈಕಿ ಅರ್ಧಕ್ಕಿಂತ ಹೆಚ್ಚು ಜನರು ಪೋಲೆಂಡ್‌ಗೆ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ಸೋಮವಾರ ತಿಳಿಸಿದೆ.

'5,00,000ಕ್ಕೂ ಹೆಚ್ಚು ನಿರಾಶ್ರಿತರು ಈಗ ಉಕ್ರೇನ್‌ನಿಂದ ನೆರೆಯ ದೇಶಗಳಿಗೆ ಪಲಾಯನ ಮಾಡಿದ್ದಾರೆ' ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಮುಖ್ಯಸ್ಥ ಫಿಲಿಪ್ಪೊ ಗ್ರಾಂಡಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ಈ ಹಿಂದಿನ ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನ್ (UNHCR) ಎಣಿಕೆ ಪ್ರಕಾರ, 2,80,000ಕ್ಕಿಂತ ಹೆಚ್ಚು ಜನರು ಉಕ್ರೇನ್‌ನಿಂದ ಪೋಲೆಂಡ್‌ ವೊಂದಕ್ಕೇ ಪಲಾಯನ ಮಾಡಿದ್ದರು.

ADVERTISEMENT

ಸುಮಾರು 85,000 ಜನ ಹಂಗೇರಿಗೆ, 36,000ಕ್ಕಿಂತ ಹೆಚ್ಚು ಮಾಲ್ಡೊವಾಗೆ, 32,500ಕ್ಕೂ ಹೆಚ್ಚು ರೊಮೇನಿಯಾಗೆ, 30,000 ಸ್ಲೋವಾಕಿಯಾಕ್ಕೆ ಮತ್ತು 300ಕ್ಕೂ ಹೆಚ್ಚು ಜನರು ಬೆಲಾರಸ್‌ಗೆ ತೆರಳಿದ್ದಾರೆ ಎಂದು ಯುಎನ್‌ಎಚ್‌ಸಿಆರ್ ಹೇಳಿದೆ.

ಉಕ್ರೇನ್‌ನಿಂದ ಹೊರಡುವವರಲ್ಲಿ ಹೆಚ್ಚಿನವರು ಇತರ ಯುರೋಪಿಯನ್ ರಾಷ್ಟ್ರಗಳತ್ತ ಸಾಗುತ್ತಿದ್ದಾರೆ ಎಂದಿರುವ ವಿಶ್ವಸಂಸ್ಥೆ, ಈಗಾಗಲೇ ಹಾಗೆ ಮಾಡಿದ ಸುಮಾರು 34,600 ಜನರನ್ನು ಎಣಿಸಿರುವುದಾಗಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.