ADVERTISEMENT

ಮ್ಯಾನ್ಮಾರ್‌ ನಗರಗಳಲ್ಲಿ ಮಿಲಿಟರಿ ವಾಹನಗಳ ತಿರುಗಾಟ; ಇಂಟರ್‌ನೆಟ್ ಸ್ಥಗಿತ

ಏಜೆನ್ಸೀಸ್
Published 15 ಫೆಬ್ರುವರಿ 2021, 1:22 IST
Last Updated 15 ಫೆಬ್ರುವರಿ 2021, 1:22 IST
ಮ್ಯಾನ್ಮಾರ್‌ನಲ್ಲಿ ಮಿಲಿಟರಿ ವಾಹನಗಳ ತಿರುಗಾಟ
ಮ್ಯಾನ್ಮಾರ್‌ನಲ್ಲಿ ಮಿಲಿಟರಿ ವಾಹನಗಳ ತಿರುಗಾಟ   

ಯಾಂಗೊನ್: ಮ್ಯಾನ್ಮಾರ್‌ನ ಹಲವು ನಗರಗಳಲ್ಲಿ ಭಾನುವಾರ ತಡರಾತ್ರಿ ಶಸ್ತ್ರಶಜ್ಜಿತ ವಾಹನಗಳು ಗಸ್ತು ತಿರುಗಾಟ ನಡೆಸಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಅಂತರ್ಜಾಲ ಸೇವೆಯನ್ನು ನಿರ್ಬಂಧಗೊಳಿಸಲಾಗಿದೆ.

ಮ್ಯಾನ್ಮಾರ್ ಜುಂಟಾ (ಸೇನಾ ಆಡಳಿತ) ಭಾನುವಾರದಂದು ಯಾಂಗೊನ್ ಸೇರಿದಂತೆ ಹಲವು ನಗರಗಳಲ್ಲಿ ಶಸ್ತ್ರಸಜ್ಜಿತ ವಾಹನಗಳನ್ನು ನಿಯೋಜಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಮಿಲಿಟರಿ ವಾಹನಗಳ ಚಲನೆಗಳ ಬಗ್ಗೆ ವಿಡಿಯೊಗಳು ಹೊರಬಂದಿದ್ದವು.

ಸಾರಿಗೆ ಹಾಗೂ ಸಂವಹನ ಸಚಿವಾಲಯದ ಆದೇಶದಂತೆ ಮೊಬೈಲ್ ಫೋನ್ ಬಳಕೆದಾರರಿಗೆ ಸೋಮವಾರ ಇಂಟರ್‌ನೆಟ್ ಸೇವೆ ಕಡಿತಗೊಳಿಸಲಾಗುವುದು ಎಂಬ ಮಾಹಿತಿಯು ಸೋರಿಕೆಯಾಗಿತ್ತು. ಪ್ರಸ್ತುತ ಇಂಟರ್‌ನೆಟ್ ಸೇವೆ ಕಡಿತಗೊಳಿಸಲಾಗಿದೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ADVERTISEMENT

ಮಿಲಿಟರಿ ಚಲನೆ ಹಾಗೂ ಇಂಟರ್‌ನೆಟ್ ಕಡಿತದ ಹಿನ್ನೆಲೆಯಲ್ಲಿ ಮ್ಯಾನ್ಮಾರ್‌ನಲ್ಲಿರುವ ಪ್ರಜೆಗಳಿಗೆ ಅಮೆರಿಕ ಎಚ್ಚರಿಕೆ ರವಾನಿಸಿದೆ.

ನಾಗರಿಕ ಅಸಹಕಾರ ಚಳುವಳಿ ಮತ್ತು ಪ್ರತಿಭಟನೆಗಳು ಮ್ಯಾನ್ಮಾರ್ ಜನರು ಪ್ರಜಾಪ್ರಭುತ್ವವನ್ನು ಬಯಸುತ್ತಿದ್ದಾರೆ ಎಂಬುದನ್ನು ತೋರಿಸುತ್ತದೆ. ನಾವು ಅವರೊಂದಿಗೆ ನಿಲ್ಲುತ್ತೇವೆ ಎಂದು ಅಮೆರಿಕ ರಾಯಭಾರ ಕಚೇರಿ ತಿಳಿಸಿದೆ.

ಮ್ಯಾನ್ಮಾರ್‌ನಲ್ಲಿ ಸೇನಾ ದಂಗೆಯನ್ನು ವಿರೋಧಿಸಿ ದೇಶದಾದ್ಯಂತ ಅಪಾರ ಸಂಖ್ಯೆಯ ಜನರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಫೆಬ್ರುವರಿ 1ರಂದು ಮಿಲಿಟರಿ ಅಧಿಕಾರವನ್ನು ಪಡಿಸಿಕೊಂಡಿತ್ತು. ಅಲ್ಲದೆ ದೇಶದ ಆಂಗ್‌ ಸಾನ್‌ ಸೂ ಕಿ ಅವರನ್ನು ಬಂಧಿಯಾಗಿಸಿ ಚುನಾಯಿತ ನಾಯಕರ ಹೊಸ ಅಧಿವೇಶನವನ್ನು ತಡೆಯಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.