ಕಠ್ಮಂಡು:ನೇಪಾಳಸರ್ಕಾರ1,00,000 ಮುಖಗವಸು(ಮಾಸ್ಕ್)ನ್ನುಮಾರಣಾಂತಿಕಕೊರೊನವೈರಸ್‌ನಿಂದ ಬಳಲುತ್ತಿರುವಚೀನಾಗೆ ಉಡುಗೊರೆಯಾಗಿ ನೀಡಿದೆ. ಈವೈರಸ್630ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿದೆ.
ವ್ಯಾಪಕವಾಗಿಕೊರೊನಾವೈರಸ್ಹರಡುತ್ತಿರುವುದರಿಂದಚೀನಾದಲ್ಲಿ ಮಾಸ್ಕ್‌ನಕೊರತೆಯಾಗಿತ್ತು, ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿನೇಪಾಳದ ವಿದೇಶಾಂಗ ಸಚಿವರು ಚೀನಾದ ರಾಯಭಾರಿಗೆ ಹಸ್ತಾಂತರಿಸಿದ್ದಾರೆ.
ಗುರುವಾರ ನಡೆದ ಉನ್ನತ ಅಧಿಕಾರಿಗಳ ಸಭೆಯು ಬಳಿಕನೇಪಾಳಸರ್ಕಾರವು 1,00,000 ಮುಖಗವಸು ನೀಡಲು ನಿರ್ಧರಿಸಿತ್ತು. ಚೀನಾ ರಾಯಭಾರಿನೇಪಾಳಸರ್ಕಾರಮತ್ತು ಅಂತರರಾಷ್ಟ್ರೀಯ ಸಮುದಾಯದ ಸಹಕಾರಕ್ಕೆ ಧನ್ಯವಾದ ಹೇಳಿದ್ದಾರೆ.
ಕೊರೊನಾಗೆಒಟ್ಟು 636 ಮಂದಿ ಜೀವವನ್ನುಕಳೆದುಕೊಂಡಿದ್ದಾರೆ. ರೋಗವು ವ್ಯಾಪಕವಾಗಿ ಹರಡುತ್ತಿದ್ದು 3,143 ಮಂದಿಕೊರೊನಾಬಾಧಿತರಾಗಿದ್ದಾರೆಎಂದು ಚೀನಾದ ಅಧಿಕಾರಿಗಳು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.