ADVERTISEMENT

New York City: ಹೊಸ ವರ್ಷದ ಮೊದಲ ದಿನವೇ ಮಮ್ದಾನಿ ಪದಗ್ರಹಣ

ಏಜೆನ್ಸೀಸ್
Published 31 ಡಿಸೆಂಬರ್ 2025, 13:36 IST
Last Updated 31 ಡಿಸೆಂಬರ್ 2025, 13:36 IST
ಜೊಹ್ರಾನ್ ಮಮ್ದಾನಿ
ಜೊಹ್ರಾನ್ ಮಮ್ದಾನಿ   

ನವದೆಹಲಿ: ಭಾರತ ಸಂಜಾತ ಜೊಹ್ರಾನ್ ಮಮ್ದಾನಿ (34) ಅವರು ಹೊಸ ವರ್ಷದ ಮೊದಲ ದಿನವೇ ನ್ಯೂಯಾರ್ಕ್‌ನ ಮೇಯರ್ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಈಗಾಗಲೇ ಸಂಭ್ರಮಾಚರಣೆ ಆರಂಭವಾಗಿದೆ.

ಎರಡು ಕಡೆಗಳಲ್ಲಿ ಪ್ರತ್ಯೇಕವಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಸಲು ಡೆಮಾಕ್ರಟಿಕ್‌ ಪಕ್ಷದ ಮುಖಂಡರು ಸಿದ್ಧತೆ ಮಾಡಿಕೊಂಡಿದ್ದಾರೆ. ಗುರುವಾರ ಮಧ್ಯರಾತ್ರಿ ಓಲ್ಡ್‌ ಸಬ್‌ವೇ ಸ್ಟೇಷನ್‌ನಲ್ಲಿ ಮಮ್ದಾನಿ ಅವರ ಕುಟುಂಬದೊಂದಿಗೆ ನಡೆಯುವ ಖಾಸಗಿ ಕಾರ್ಯಕ್ರಮದಲ್ಲಿ ಅವರು ಮೊದಲಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ನಂತರ ಅದೇ ದಿನ ಮಧ್ಯಾಹ್ನ ಸಿಟಿ ಹಾಲ್‌ ಹೊರಗೆ ಬೃಹತ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಅಲ್ಲಿ ಎರಡನೇ ಬಾರಿಗೆ ಪದಗ್ರಹಣ ಮಾಡಲಿದ್ದಾರೆ. ನ್ಯೂಯಾರ್ಕ್‌ ಅಟಾರ್ನಿ ಜನರಲ್‌ ಲೆಟಿಟಿಯಾ ಜೇಮ್ಸ್‌ ಅವರು ಪ್ರಮಾಣ ಬೋಧಿಸಲಿದ್ದಾರೆ.

ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆಯೇ ನೂತನ ಮೇಯರ್‌ ಅವರ ಅಧಿಕಾರಾವಧಿ ಆರಂಭವಾಗುತ್ತದೆ. ನಿರ್ಗಮಿತ ಮೇಯರ್‌ ಎರಿಕ್‌ ಆ್ಯಡಮ್ಸ್‌ ಅವರು ಟೈಮ್ಸ್‌ ಸ್ಕ್ವೇರ್‌ನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.