ADVERTISEMENT

ಭಾರತವು ಕೋವಿಡ್ ಬಿಕ್ಕಟ್ಟನ್ನು ಸ್ಥಿರತೆ, ಧೈರ್ಯದಿಂದ ಎದುರಿಸಿದೆ: ನಿರ್ಮಲಾ

ವಿಶ್ವಬ್ಯಾಂಕ್‌ನ ಅಭಿವೃದ್ಧಿ ಸಮಿತಿ ಸಭೆ

ಪಿಟಿಐ
Published 15 ಅಕ್ಟೋಬರ್ 2021, 6:33 IST
Last Updated 15 ಅಕ್ಟೋಬರ್ 2021, 6:33 IST
ನಿರ್ಮಲಾ ಸೀತಾರಾಮನ್
ನಿರ್ಮಲಾ ಸೀತಾರಾಮನ್   

ವಾಷಿಂಗ್ಟನ್‌: ಭಾರತ, ಕೋವಿಡ್‌ ಬಿಕ್ಕಟ್ಟನ್ನು ಪರಿಣಾಮಕಾರಿಯಾಗಿ ಎದುರಿಸುವ ಜೊತೆಗೆ, ಜಾಗತಿಕ ಮಟ್ಟದಲ್ಲಿ ಈ ಸಾಂಕ್ರಾಮಿಕದ ವಿರುದ್ಧ ನಡೆದ ಹೋರಾಟದಲ್ಲೂ ಪ್ರಮುಖ ಪಾತ್ರವಹಿಸಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದರು.

ಇಲ್ಲಿನ ವಿಶ್ವ ಬ್ಯಾಂಕ್ ಅಭಿವೃದ್ಧಿ ಸಮಿತಿಯ ಸಭೆಯನ್ನು ಉದ್ದೇಶಿಸಿ ಮಾಡಿದ ಸಚಿವರು, ಭಾರತದ ಆರ್ಥಿಕತೆಯು ತ್ವರಿತಗತಿಯಲ್ಲಿ ಚೇತರಿಕೆ ಕಂಡಿರುವುದನ್ನು ಉಲ್ಲೇಖಿಸುತ್ತಾ, ಮೋದಿ ಸರ್ಕಾರ, ಆರ್ಥಿಕ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳುವುದರ ಜೊತೆಗೆ, ಈ ಕೋವಿಡ್‌ ಬಿಕ್ಕಟ್ಟನ್ನೇ ಒಂದು ಅವಕಾಶವಾಗಿ ಬಳಸಿಕೊಂಡು ರಚನಾತ್ಮಕ ಸುಧಾರಣೆಗಳನ್ನು ಕೈಗೊಂಡಿದೆ‘ ಎಂದು ಹೇಳಿದರು.

‘ಸರ್ಕಾರ ಕೈಗೊಂಡ ಕ್ರಮಗಳು ಭಾರತದ ನಿರಂತರ ಆರ್ಥಿಕ ಬೆಳವಣಿಗೆಗೆ ಬಲವಾದ ಅಡಿಪಾಯವನ್ನು ಹಾಕಿವೆ‘ ಎಂದು ಅವರು ಹೇಳಿದರು.

ಅಂತರರಾಷ್ಟ್ರೀಯ ಹಣಕಾಸು ನಿಧಿಯ(ಐಎಂಎಫ್‌) ವಿಶ್ವ ಆರ್ಥಿಕ ದೃಷ್ಟಿಕೋನದ ಪ್ರಕಾರ, 2021ರಲ್ಲಿ ತ್ವರಿತಗತಿಯಲ್ಲಿ ಆರ್ಥಿಕ ಚೇತರಿಕೆ ಕಂಡ ಪ್ರಮುಖ ರಾಷ್ಟ ಭಾರತ ಎಂದು ಹೇಳಲಾಗಿದೆ. ಈ ಪ್ರಕಾರ, ದೇಶದಲ್ಲಿ 2021ರಲ್ಲಿ ಶೇ 9.5 ಮತ್ತು 2022ರಲ್ಲಿ ಶೇ 8.5ರಷ್ಟು ಆರ್ಥಿಕ ಪ್ರಗತಿಯಾಗುವುದಾಗಿ ಅಂದಾಜಿಸಲಾಗಿದೆ.

ಸಾಂಕ್ರಾಮಿಕ ರೋಗದ ಹೊರತಾಗಿಯೂ, ಭಾರತವು 2020–21 ಹಣಕಾಸು ವರ್ಷದಲ್ಲಿ ಅತಿ ಹೆಚ್ಚು ವಿದೇಶಿ ಬಂಡವಾಳ ಹೂಡಿಕೆಯನ್ನು ಸ್ವೀಕರಿದೆ ಎಂದು ಹಣಕಾಸು ಸಚಿವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.