ADVERTISEMENT

ರಷ್ಯಾ ನಡೆಸಿದ ಯುದ್ಧದಲ್ಲಿ 10 ಸಾವಿರ ಯೋಧರ ಸಾವು: ಉಕ್ರೇನ್‌

ಏಜೆನ್ಸೀಸ್
Published 2 ಡಿಸೆಂಬರ್ 2022, 14:28 IST
Last Updated 2 ಡಿಸೆಂಬರ್ 2022, 14:28 IST
ಉಕ್ರೇನ್‌ ಸೈನಿಕರು
ಉಕ್ರೇನ್‌ ಸೈನಿಕರು    

ಕೀವ್‌: ರಷ್ಯಾ ಪಡೆಗಳು ತಮ್ಮ ನೆಲದ ಮೇಲೆ ಒಂಬತ್ತು ತಿಂಗಳುಗಳಿಂದ ನಡೆಸುತ್ತಿರುವ ಆಕ್ರಮಣದ ವಿರುದ್ಧದ ಹೋರಾಟದಲ್ಲಿ ಸುಮಾರು 10 ಸಾವಿರದಿಂದ 13 ಸಾವಿರ ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಉಕ್ರೇನ್‌ ಹೇಳಿದೆ.

ಸೇನಾ ಮುಖ್ಯಸ್ಥರ ಹೇಳಿಕೆ ಆಧರಿಸಿ ಉಕ್ರೇನ್‌ ಅಧ್ಯಕ್ಷರ ಉನ್ನತ ಸಲಹೆಗಾರರು ನೀಡಿರುವ ಈ ಅಂಕಿ–ಅಂಶ ಪಾಶ್ಚಿಮಾತ್ಯ ರಾಷ್ಟ್ರಗಳ ನಾಯಕರು ಅಂದಾಜಿಸಿರುವುದಕ್ಕಿಂತ ಅಜಗಜಾಂತರ ಮಟ್ಟದಲ್ಲಿ ಕಡಿಮೆ ಇದೆ.

ಗಡಿಯ ಸಂಪರ್ಕ ರೇಖೆಯ ಉದ್ದಕ್ಕೂ ಉಕ್ರೇನ್‌ ಸೇನಾಪಡೆಗಳನ್ನು ಮತ್ತು ಮೂಲಸೌಕರ್ಯಗಳನ್ನು ಗುರಿಯಾಗಿಸಿ ರಷ್ಯಾ ಪಡೆಗಳು, ಕ್ಷಿಪಣಿಗಳು ಮತ್ತು ವೈಮಾನಿಕ ದಾಳಿಗಳನ್ನು ಮುಂದುವರಿಸಿದೆ. ನಮ್ಮ ಸೇನಾಪಡೆಗಳನ್ನು ಹಿಮ್ಮೆಟ್ಟಿಸಲುಬಾಖ್‌ಮಟ್‌ ಮತ್ತು ಅವ್ದಿವ್ಕಾ ಸೇರಿ 12ಕ್ಕೂ ಹೆಚ್ಚು ಪಟ್ಟಣಗಳನ್ನು ರಷ್ಯಾ ಕೇಂದ್ರೀಕರಿಸಿ ದಾಳಿ ನಡೆಸುತ್ತಿದೆ ಎಂದು ಉಕ್ರೇನ್‌ ಸೇನೆ ಶುಕ್ರವಾರಹೇಳಿದೆ.

ADVERTISEMENT

ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಅವರ ಉನ್ನತ ಸಲಹೆಗಾರ ಮಿಖಾಯಿಲೊ ಪೊಡೊಲಿಯಾಕ್‌ ಅವರು, ಯುದ್ಧದಲ್ಲಿ ಹತರಾದ ಯೋಧರ ಅಂಕಿಅಂಶವನ್ನು ಗುರುವಾರ ಬಿಡುಗಡೆ ಮಾಡಿದರು. ಗಾಯಗೊಂಡಿರುವ ನಾಗರಿಕರ ಸಂಖ್ಯೆಗೆ ಹೋಲಿಸಿದರೆ ಗಾಯಾಳು ಯೋಧರ ಸಂಖ್ಯೆ ಹೆಚ್ಚಾಗಿದೆ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.