ADVERTISEMENT

ವಿಶ್ವಾಸಮತ ಗೆದ್ದ ಪಾಕ್‌ ಪ್ರಧಾನಿ ಇಮ್ರಾನ್ ಖಾನ್‌‌: ಅಷ್ಟಕ್ಕೂ ಯಾಕೆ ಈ ಪ್ರಹಸನ?

ಪಿಟಿಐ
Published 6 ಮಾರ್ಚ್ 2021, 9:31 IST
Last Updated 6 ಮಾರ್ಚ್ 2021, 9:31 IST
ಪಾಕಿಸ್ತಾನದ ಹಣಕಾಸು ಮಂತ್ರಿ ಶಾ ಮೊಹಮದ್‌ ಖುರೇಷಿ ಸೋಲಿನ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಇಮ್ರಾನ್‌ ಖಾನ್‌ (ಎಎಫ್‌ಪಿ ಚಿತ್ರ)
ಪಾಕಿಸ್ತಾನದ ಹಣಕಾಸು ಮಂತ್ರಿ ಶಾ ಮೊಹಮದ್‌ ಖುರೇಷಿ ಸೋಲಿನ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಇಮ್ರಾನ್‌ ಖಾನ್‌ (ಎಎಫ್‌ಪಿ ಚಿತ್ರ)   

ಇಸ್ಲಾಮಾಬಾದ್:‌ ವಿರೋಧ ಪಕ್ಷಗಳ ಬಹಿಷ್ಕಾರದ ನಡುವೆ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಶನಿವಾರ ವಿಶ್ವಾಸ ಮತ ಗಳಿಸಿದ್ದಾರೆ.

342 ಸದಸ್ಯರನ್ನೊಳಗೊಂಡ ಸಂಸತ್ತಿನ ಕೆಳಮನೆ ರಾಷ್ಟ್ರೀಯ ಅಸೆಂಬ್ಲಿಯಲ್ಲಿ ಪ್ರಧಾನಿ ಇಮ್ರಾನ್‌ ಖಾನ್‌ 178 ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದರು.

ವಿಶ್ವಾಸಮತ ಯಾಚಿಸಲು ವಿಶೇಷ ಅಧಿವೇಶನವನ್ನು ಶನಿವಾರ ಕರೆಯಲಾಗಿತ್ತು. ಆದರೆ, 11 ಪಕ್ಷಗಳ ಮೈತ್ರಿಕೂಟ ಪಾಕಿಸ್ತಾನ ಡೆಮಾಕ್ರಟಿಕ್‌ ಮೂವ್‌ಮೆಂಟ್‌ (ಪಿಡಿಎಂ) ಬಹಿಷ್ಕಾರ ಹಾಕಿತ್ತು. ಹೀಗಾಗಿ, ವಿರೋಧ ಪಕ್ಷಗಳ ಸದಸ್ಯರು ಗೈರುಹಾಜರಿಯಲ್ಲಿ ಇಮ್ರಾನ್‌ ಖಾನ್‌ ಬಹುಮತ ಸಾಬೀತುಪಡಿಸಿದರು.

ADVERTISEMENT

ವಿಶ್ವಾಸಮತ ಏಕೆ?

ಹಣಕಾಸು ಸಚಿವ ಅಬ್ದುಲ್‌ ಹಫೀಜ್‌ ಶೇಖ್‌ ಅವರು ಬುಧವಾರ ನಡೆದ ಸೆನೆಟ್‌ ಚುನಾವಣೆಯಲ್ಲಿ ಸೋಲು ಅನುಭವಿಸಿದ್ದರಿಂದ ಇಮ್ರಾನ್‌ ಖಾನ್‌ ವಿಶ್ವಾಸ ಮತಯಾಚಿಸಿದರು. ಶೇಖ್‌ ಸೋಲು ಅನುಭವಿಸಿದ ಬಳಿಕ ಇಮ್ರಾನ್ ಖಾನ್‌ ಅವರು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.